International News: ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಶುರುವಾಗಿದ್ದ, ಹಮಾಸ್- ಇಸ್ರೇಲಿಗರ ಯುದ್ಧ ಇನ್ನೂ ಮುಗಿದಿಲ್ಲ. ಇವರಿಬ್ಬರ ಯುದ್ಧದ ನಡುವೆ ಅದೆಷ್ಟೋ ಅಮಾಯಕರು, ಮುಗ್ದ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ಯಾಲೇಸ್ತಿನ್ ಸಮಸ್ಯೆಗೆ ಪರಿಹಾರ ಹುಡುಕಲು, ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ನಡೆಸಬೇಕು ಎಂದು ಭಾರತ ಸಲಹೆ ನೀಡಿದೆ.
ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ, ಅರಿಂದಮ್ ಬಾಗ್ಚಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ನಾವು ಇಸ್ರೇಲ್ ಮೇಲಿನ ಭೀಕರ ದಾಳಿಯನ್ನು ಬಲವಂತವಾಗಿ ಖಂಡಿಸುತ್ತೇವೆ. ಮತ್ತು ಒತ್ತೆಯಾಳಾಗಿ ಇರಿಸಿಕೊಂಡವರನ್ನು ತಕ್ಷಣ ಮತ್ತು ಬೇಷರತ್ ಆಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದಿದ್ದಾರೆ.
ಈ ಯುದ್ಧದಲ್ಲಿ ನಡೆಯುತ್ತಿರುವ ಸಾವು ನೋವು, ಉದ್ವಿಗ್ನತೆ ಎಲ್ಲವೂ ಶಾಂತವಾಗಿಸುವ ಎಲ್ಲ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಭಾರತದಿಂದ 38 ಟನ್‌ಗಳಷ್ಟು ಪರಿಹಾರಗಳನ್ನು ಇಲ್ಲಿನ ಸಂತ್ರಸ್ತರಿಗೆ ನೀಡಲಾಗಿದೆ. ಗಾಜಾದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ಬಾಗ್ಜಿ ಹೇಳಿದ್ದಾರೆ.
ಅಲ್ಲದೇ, ಈ ಯುದ್ಧ, ಹಿಂಸೆ, ಉದ್ವಿಗ್ನತೆಗಳನ್ನೆಲ್ಲ ನಿಲ್ಲಿಸಿ, ಶಾಂತಿಯುತವಾಗಿ ಮಾತನಾಡಿ, ಪರಿಹಾರ ಕಂಡುಕೊಳ್ಳಬೇಕೆಂದು, ಇಲ್ಲಿನ ಎಲ್ಲಾ ಪಕ್ಷಗಳಿಗೂ ನಾವು ಒತ್ತಾಯಿಸಿದ್ದೇವೆ ಎಂದಿದ್ದಾರೆ. ಇನ್ನು ಸಂಘರ್ಷ ಕೊಂಚ ಕಡಿಮೆಯಾದಾಗ, ಭಾರತದ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೇತನ್ಯಾಹು, ಪ್ಯಾಲೇಸ್ತಿನ್ ಅಧ್ಯಕ್ಷ ಮೊಹಮದ್ ಅಬ್ಬಾಸ್ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಒಟ್ಟಾರೆಯಾಗಿ ಗಾಜಾವನ್ನು ಪಡೆದುಕೊಳ್ಳಲು ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದ್ದು, ಇವರ ದ್ವೇಷದಿಂದ ಹಲವು ಅಮಾಯಕರ ಪ್ರಾಣ ಹೋಗಿದೆ. ಇನ್ನು ಕೆಲವರು ಅಪರಹಣಕೊಂಡಿದ್ದಾರೆ. ಈ ಯುದ್ಧ, ಹಿಂಸೆ ಇನ್ನು ಎಲ್ಲಿವರೆಗೋ ಕಾದು ನೋಡಬೇಕು.