International News: ಕಳೆದ ವರ್ಷ ಅಕ್ಟೋಬರ್ 7ರಂದು ಶುರುವಾಗಿದ್ದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ನಾವು ಹಮಾಸ್ ಉಗ್ರರ ಅಂತ್ಯ ಮಾಡಿಯೇ ಮಾಡುತ್ತೇವೆ ಎಂದು ಇಸ್ರೇಲ್ ಅಧ್ಯಕ್ಷ ನೇತನ್ಯಾಹು ಹೇಳಿದ್ದಾರೆ.
ಆದರೆ ಇವರ ಯುದ್ಧ, ದ್ವೇಷದ ನಡುವೆ ಹಲವು ಅಮಾಯಕ ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ. ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, 35 ನಿರಾಶ್ರಿತರು ಸಾವನ್ನಪ್ಪಿದ್ದಾರೆ. ಮತ್ತು ಹಲವರು ಗಾಯಗೊಂಡಿದ್ದಾರೆ.
ಈ ದಾಳಿಯಲ್ಲಿ 35 ಪ್ಯಾಲೆಸ್ತಿನ್ ನಾಗರಿಕರು ಸಾವನ್ನಪ್ಪಿದ್ದು, ಹಲವು ಗಾಯಗೊಂಡಿದ್ದಾರೆ. ಇನ್ನು ಹಮಾಸ್ ಸಂಘಟನೆಯ ಓರ್ವ ವ್ಯಕ್ತಿ ಈ ಬಗ್ಗೆ ಮಾತನಾಡಿದ್ದು, ಈ ದಾಳಿಗೆ ಇಸ್ರೇಲ್ ಮತ್ತಿ ಅಮೆರಿಕ ಸೇನೆ ಎರಡೂ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕ ನೀಡುತ್ತಿರುವ ಶಸ್ತ್ರಾಸ್ತ್ರಗಳನ್ನು ಬಳಸಿ, ಇಸ್ರೇಲ್ ಈ ರೀತಿ ಪ್ಯಾಲೆಸ್ತಿನ್ ನಾಾಗರಿಕರ ನರಮೇಧ ನಡೆಸುತ್ತಿದೆ ಎಂದು ಹಮಾಸ್ ಆರೋಪಿಸಿದೆ. ಅಲ್ಲದೇ, ಇನ್ನು ಕೆಲ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಬಹುದು ಅಂತಾ ಅಂದಾಜಿಸಲಾಗಿದೆ.
ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ, ಎಲ್ಲರಿಗೂ ಮಾದರಿಯಾದ ವ್ಯಕ್ತಿ
Political News: ರಾಹುಲ್ ಗಾಂಧಿ ಎಂಟ್ರಿ ಕೊಡುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ