International News: ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ನಡೆಯುತ್ತಿದೆ. ಗಾಜಾಗಾಗಿ ಈ ಯುದ್ಧ ಶುರುವಾಗಿದ್ದು, ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಇಸ್ರೇಲ್ ಪ್ರಧಾನಿ, ಬೆಂಜಮಿನ್ ನೇತನ್ಯಾಹು ಪ್ಯಾಲೇಸ್ತೇನಿಯರಿಗೆ ಎಚ್ಚರಿಕೆ ನೀಡಿದ್ದಾರೆ.
ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಶರಣಾಗತಿ ಎಂಬಂತೆ. ಅದು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಇಸ್ರೇಲ್- ಹಮಾಸ್ ಯುದ್ಧದ ನಡುವೆ ಕದನ ವಿರಾಮ ಸಾಧ್ಯವಿಲ್ಲವೆಂದು ನೇತನ್ಯಾಹು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಆಕ್ರಮಣ ಮಾಡಲು ಯಾವುದೇ ವೇಳಾ ಪಟ್ಟಿ ಇಲ್ಲ. ನಮ್ಮ ಇಸ್ರೇಲ್ ಸೇನೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತೇವೆ. ಅಸಾಧಾರಣವಾಗಿ ದೇಶವನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ನೇತನ್ಯಾಹು ಹೇಳಿದ್ದಾರೆ.
ಇಷ್ಟೇ ಅಲ್ಲದೇ, ಯುದ್ಧ ನಡೆಯಲು ಎಷ್ಟು ಸಮಯ ನಡೆದರೂ ನಾವು ಯುದ್ಧ ಮಾಡಲು ಸನ್ನದ್ಧರಾಗಿದ್ದೇವೆ. ಎಲ್ಲಿಯವರೆಗೂ ಯುದ್ಧ ನಡೆಯುತ್ತಲೇ ಇರುತ್ತದೆಯೋ, ಅಲ್ಲಿಯವರೆಗೂ ನಾವು ಅವರೊಂದಿಗೆ ಹೋರಾಡುತ್ತೇವೆ. ಕದನ ವಿರಾಮ ತೆಗೆದುಕೊಳ್ಳುವ ಮಾತೇ ಇಲ್ಲ. ಗಾಜಾವನ್ನು ಆಳಲು ನೀವು ಪ್ರಯತ್ನಿಸಬೇಡಿ. ನಾವು ಅದನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಆ ಸ್ಥಳವನ್ನು ಸೈನ್ಯರಹಿತಗೊಳಿಸಿ, ಮರುನಿರ್ಮಾಣ ಮಾಡಿ, ಅದಕ್ಕೆ ಉತ್ತಮ ಭವಿಷ್ಯ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿಯ ಈ ಮಾತುಗಳನ್ನು ಕೇಳುತ್ತಿದ್ದರೆ, ಇಸ್ರೇಲ್‌ನ 1400 ಜನರನ್ನು ಹಮಾಸ್ ಉಗ್ರರು ಕೊಂದಿದ್ದಕ್ಕೆ, ಪ್ರತೀಕಾರವಾಗಿ ಹಮಾಸ್ ಅನ್ನು ಬುಡದಿಂದಲೇ ನಾಶ ಮಾಡಲು, ಇಸ್ರೇಲ್ ಪ್ರತಿಜ್ಞೆ ಮಾಡಿದಂತಿದೆ.