ಚಾಂಗ್‍ವಾನ್ (ದ.ಕೊರಿಯಾ) : ತಾರಾ ಶೂಟರ್ ಮೈರಾಜ್ ಅಹಮದ್ ಐಎಸ್‍ಎಸ್‍ಎಫ್ ಶೂಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಪುರುಷರ ಸ್ಕೀಟ್ ವಿಭಾಗದ ಫೈನಲ್‍ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಈ ಸಾಧಾನೆ ಮಾಡಿದ ಮೊದಲ ಭಾರತೀಯ ಶೂಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರೆ.
46 ವರ್ಷದ ಮೈರಾಜ್ ಅಹಮದ್ 40 ಶಾಟ್‍ಗಳಲ್ಲಿ 37 ಅಂಕ ಪಡೆದರು. ದ.ಕೊರಿಯಾದ ಮಿನ್ಸು ಕಿಮ್ 36 ಅಂಕ ಹಾಗೂ ಬ್ರಿಟನ್‍ನ ಬೆನ್ ಲವೆಲ್ಲಿನ್ 26 ಅಂಕ ಪಡೆದರು.
ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ 125ರಲ್ಲಿ 119 ಅಂಕ ಪಡೆದು ಅರ್ಹೆತೆ ಪಡೆದಿದ್ದರು.
ಎರಡು ಬಾರಿ ಒಲಿಂಪಿಯನ್ ಆಗಿರುವ ಮೈರಾಜ್ ಅಹ್ಮದ್ ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ತಂಡದ ಪರ ಅತಿ ಹಿರಿಯ ಶೂಟರ್ ಆಗಿದ್ದಾರೆ. 2016ರಲ್ಲಿ ರಿಯೋ ಡಿ ಜನೈರೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಇನ್ನು ಮಹಿಳೆಯರ 50ಮೀ. ರೈಫಲ್ 3ಪಿ ತಂಡದ ವಿಭಾಗದಲ್ಲಿ ಶೂಟರ್‍ಗಳಾದ ಅಂಜುಮ್ ಮೌದ್ಗಿಲ್,ಆಶಿ ಚೌಕ್ಸಿ ಅವರ ತಂಡ ಕಂಚಿನ ಪದಕ ಗೆದ್ದಿದ್ದರು.
ಇದೇ ವಿಭಾಗದಲ್ಲಿ ವಿಜಯ್ ವೀರ್ ಸಿಂಗ್ ಪದಕದ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಸೋಮವಾರ ಭಾರತ ತಲಾ ಒಂದು ಚಿನ್ನ ಮತ್ತು ಕಂಚಿನ ಪದಕದೊಂದಿಗೆ ಒಟ್ಟು 13 ಪದಕಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.