Hubli News: ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಗೊಂದಲಗಳಿರುವುದು ನಿಜ. ಈಗಾಗಲೇ ನಮ್ಮ ಹೈಕಮಾಂಡ್ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜತೆಗೆ ಒನ್ ಡು ಒನ್ ಕರೆಯಿಸಿಕೊಂಡು ಮಾತಾಡಿದ್ದಾರೆ. ಬರೋ ಒಂದು ವಾರದಲ್ಲಿ ಎಲ್ಲವೂ ಸರಿಯಾಗುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮುರುಗೇಶ್ ನಿರಾಣಿ, ರಾಜ್ಯಾಧ್ಯಕ್ಷರ ಚುನಾವಣೆ ಕುರಿತು ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳತ್ತದೆ. ಯಾರೇ ನಿಂತರು ಒಮ್ಮತದಿಂದ ಆಯ್ಕೆ ಮಾಡುತ್ತೇವೆ. ಹೈಕಮಾಂಡ್ ನಿರ್ಧರಕ್ಕೆ ನಾವೆಲ್ಲರು ಬದ್ಧರಾಗಿರುತ್ತೇವೆ ಎಂದು ನಿರಾಣಿ ಹೇಳಿದ್ದಾರೆ.
ಕೇಂದ್ರ ಬಜೆಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ, ನಮ್ಮ ಕೇಂದ್ರ ಸರ್ಕಾರ ಇಂದು ಬಜೆಟ್ ಮಂಡಿಸುತ್ತಿದೆ. ಎಂಟನೇ ಬಾರಿಗೆ ನಮ್ಮ ನಿರ್ಮಲಾ ಸೀತಾರಮ್ಮನರು ಬಜೆಟ್ ಮಂಡಿಸುತ್ತಿದ್ದಾರೆ. ಸರ್ವತೋಮುಖ ಅಭಿವೃದ್ಧಿ ಬಜೆಟ್ ಇದಾಗಿರುತ್ತದೆ ಎಂಬ ನಿರೀಕ್ಷೆ ನಮ್ಮಲಿದೆ. ರಾಜ್ಯ, ಉತ್ತರ ಕರ್ನಾಟಕ ಸೇರಿ ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೂ ಕೊಡುಗೆಗಳು ಸಿಗುವ ಲಕ್ಷಣಗಳಿವೆ. ಈ ಭಾಗದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರು ಕೊಡುಗೆ ನೀಡುತ್ತಾರೆ. ಬಜೆಟ್ ಮಂಡನೆ ಬಳಿಕ ದೇಶದ ಜಿಡಿಪಿ ಹೆಚ್ಚಾಗುವ ನಿರೀಕ್ಷ ಇದೆ ಎಂದು ನಿರಾಣಿ ಹೇಳಿದ್ದಾರೆ.
ಕೇಂದ್ರ ಸಚಿವರಾದ ಜೋಶಿಯವರು ಕಬ್ಬಿನ ಎಂಆರ್‌ಪಿ ಬೆಲೆಯನ್ನು ಹೆಚ್ಚಳ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರಿಗೆ ಕಬ್ಬು ಬೆಳೆಗಾರರು, ಸಕ್ಕರೆ ಉದ್ಯಮದವರು ಸೇರಿ ಬ್ಯಾಂಕ ಅಧಿಕಾರಿಗಳ ವತಿಂದ ಅಭಿನಂದನೆ. ದೇಶ ವ್ಯಾಪಿ ಸುಮಾರು 11 ಕೋಟಿ ರೈತರು ಕಬ್ಬು ಬೆಳೆಗಾರರಿದ್ದಾರೆ. ಸಕ್ಕರೆ ಉದ್ಯಮ ನಷ್ಟಕ್ಕೆ ಹೋದಲ್ಲಿ ರೈತರಿಗೂ ಕಷ್ಟವಾಗುತ್ತದೆ. ಇದನ್ನು ಅರಿತು ಕೇಂದ್ರ ಸರ್ಕಾರ ಎಂಎಸ್‌ಪಿರಿಟರ್ನ್ ಹೆಚ್ಚಳ ಮಾಡಿದೆ. ಸಕ್ಕರೆ ಕಾರ್ಖಾನೆಗಳಿಂದ ಬರೋ ವೇಷ್ಟನಿಂದ ಸಿಎನ್‌ಜಿ ತಯಾರಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಹಾಗೂ ಜೋಶಿಯವರ ಶ್ರಮ ತುಂಬಾ ಇದೆ. ಬರೋ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಡಿಸೇಲ್ ಅವಶ್ಯಕತೆ ಇರುವುದಿಲ್ಲ.
ಕೇಂದ್ರ ಸರ್ಕಾರ ಎಥನಾಲ್ ತಯಾರಿಕೆ ಒತ್ತು ನೀಡಿದೆ. ಇದರಿಂದ ದೇಶದ ಅಭಿವೃದ್ಧಿಗೆ ತುಂಬಾ ಸಹಕಾರಿಯಾಗುತ್ತದೆ. ವೇಳೆ ಪಕ್ಷಗಳು ಬಜೆಟ್ ಮುಗಿದ ಮೇಲೆ ವಿಶ್ಲೇಷಣೆ ಮಾಡಬೇಕು. ಕೂಸು ಹುಟ್ಟೋ ಮೊದಲೇ ಕೂಲಾಯಿ ಹೊಲಿಸೋದನ್ನ ವಿಪಕ್ಷಗಳು ಬಿಡಲಿ ಎಂದು ಮುರುಗೇಶ್ ನಿರಾಣಿ ಟಾಂಗ್ ನೀಡಿದ್ದಾರೆ.




