Tuesday, April 15, 2025

Latest Posts

IT Raid : ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಯಲ್ಲಿ ದಾಖಲೆ ರಹಿತ ನೋಟಿನ ಕಂತೆಗಳು ಪತ್ತೆ..!

- Advertisement -

ಉತ್ತರ ಪ್ರದೇಶ : ನಿವೃತ್ತ ಐಪಿಎಸ್ ಅಧಿಕಾರಿಗಳ(Retired IPS officers)ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಇಂದು ದಾಳಿ ನಡೆಸಿದ್ದಾರೆ. ಉತ್ತರಪ್ರದೇಶದ ನೋಯ್ಡಾದ ಸೆಕ್ಟರ್ 50 ರಲ್ಲಿರುವ ಮಾಜಿ ಐಪಿಎಸ್ ಅಧಿಕಾರಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.ದಾಳಿ ವೇಳೆ 500 ಹಾಗೂ 2000 ದಾಖಲೆ ರಹಿತ ನೋಟಿನ ಕಂತೆಗಳು ಪತ್ತೆಯಾಗಿದೆ. ನೆಲದ ಅಂತಸ್ತಿನಲ್ಲಿ 650 ಕೋಟಿ ಲಾಕರ್ ಕೂಡ ಪತ್ತೆಯಾಗಿದೆ. ಮಾಜಿ ಐಪಿಎಸ್ ಅಧಿಕಾರಿಯ ಪತ್ನಿ ಹೆಸರಲ್ಲಿ ಖಾಸಗಿ ಲಾಕರ್ ಬಾಡಿಗೆಗೆ ಕೊಡುವ ಕೆಲಸ ನಡೆಸಲಾಗುತ್ತಿತ್ತು, ಈ ಒಂದು ಲಾಕರ್ ಗಳಲ್ಲಿ 20 ಲಕ್ಷ ರೂಪಾಯಿ ಅಘೋಷಿತ ನಗದು ಇರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ(Income Tax Department) ಮಾಹಿತಿ ಸಿಕ್ಕಿತ್ತು. ಇದರ ಬೆನ್ನೆಲ್ಲೇ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಯುಪಿ ಕೇಡರ್ನ ಮಾಜಿ ಐಪಿಎಸ್ ಅಧಿಕಾರಿ 1983 ಬ್ಯಾಚ್ ಡಿಜಿ ಶ್ರೇಣಿಯ ಅಧಿಕಾರಿ ಮನೆಯಲ್ಲಿ ಇಷ್ಟು ಪ್ರಮಾಣದ ಹಣ ಪತ್ತೆಯಾಗಿದೆ. ದಾಖಲೆ ವೇತನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಬೇನಾಮಿ ಹಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss