Monday, December 23, 2024

Latest Posts

ಜನಮನ್ನಣೆ ಗಳಿಸಿದ ಜೆ.ಪಿ.ನಡ್ಡಾ ಅವರ ರೋಡ್ ಷೋ

- Advertisement -

Bengaluru News: ಬೆಂಗಳೂರು: ಬೇಲ್ (ಜಾಮೀನು) ಅಥವಾ ಜೈಲಿನಲ್ಲಿರುವ ಇಂಡಿ ಒಕ್ಕೂಟದ ಭ್ರಷ್ಟಾಚಾರಿ ನಾಯಕರನ್ನು ಬೆಂಬಲಿಸದಿರಿ. ಸಮರ್ಥವಾಗಿ ಹಾಗೂ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಭಾರತವನ್ನು ಮುನ್ನಡೆಸಲು ನರೇಂದ್ರ ಮೋದಿಯವರ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಲೋಕಸಭಾ ಸೀಟು ಗೆಲ್ಲಲು ಬಿಜೆಪಿಗೆ ಮತ ಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮನವಿ ಮಾಡಿದರು.

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಇಂದು ಬೃಹತ್ ರೋಡ್ ಷೋದಲ್ಲಿ ಭಾಗವಹಿಸಿದ ನಡ್ಡಾ ಅವರು ಜನಮನ ಗೆದ್ದರು. ನಿರಂತರ ಹಗರಣಗಳನ್ನು ಮಾಡಿದ ಡಿ.ಕೆ.ಶಿವಕುಮಾರ್, ಅಖಿಲೇಶ್ ಯಾದವ್, ಮಮತಾ ಸರಕಾರದ ಸಚಿವ, ಡಿಎಂಕೆ ಮತ್ತಿತರ ಪಕ್ಷಗಳನ್ನು ಸೇರಿಸಿ ಇಂಡಿ ಒಕ್ಕೂಟ ರಚಿಸಲಾಗಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪಿ.ಚಿದಂಬರಂ, ಲಲ್ಲೂ ಯಾದವ್, ಡಿ.ಕೆ.ಶಿವಕುಮಾರ್ ಜಾಮೀನಿನಡಿ ಹೊರಗಡೆ ಇದ್ದಾರೆ.

ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯ ಮತ್ತಿತರ ನಾಯಕರು ಜೈಲಿನಲ್ಲಿದ್ದಾರೆ. ಮಮತಾರ ಸಚಿವ ಜೈಲಿನಲ್ಲಿದ್ದಾರೆ ಎಂದು ಅವರು ಜನರ ಗಮನ ಸೆಳೆದರು. ಬಸವರಾಜ ಬೊಮ್ಮಾಯಿಯವರನ್ನು ಗೆಲ್ಲಿಸುವ ಮೂಲಕ ದೆಹಲಿಗೆ ಕಳುಹಿಸಿ ಕೊಡಿ ಎಂದು ವಿನಂತಿಸಿದರು.

ಮಾಜಿ ಮುಖ್ಯಮಂತ್ರಿ ಮತ್ತು ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ವಿಶ್ವನಾಯಕ ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಜನರ ಜೀವ ಕಾಪಾಡಿದವರು. ಮನೆಮನೆಗೆ ಜಲಜೀವನ್ ಮಿಷನ್ ಮೂಲಕ ನೀರು ಕೊಟ್ಟವರು. ಅವರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಅವರಿಗೆ ಧನ್ಯವಾದ ಸಮರ್ಪಿಸಲು ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದರು.

ಅನ್ನ ಕೊಟ್ಟು, ನೀರು ಕೊಟ್ಟು, ಮನೆ ಕೊಟ್ಟು ಪ್ರಾಣ ಉಳಿಸಿದಂಥ ಮೋದಿಯವರಿಗೆ ಬೆಂಬಲ ನಿಮ್ಮದಾಗಲಿ ಎಂದು ವಿನಂತಿಸಿದರು. ಪಿತ್ರಾರ್ಜಿತ ಆಸ್ತಿ ಕಸಿದುಕೊಳ್ಳುವ ಕಾಂಗ್ರೆಸ್ ಮುಖಂಡರ ಚಿಂತನೆಯನ್ನು ತಿಳಿಸಿದರಲ್ಲದೆ, ಇಂಥ ಚಿಂತನೆಯ ರಾಹುಲ್ ಗಾಂಧಿ ಬೇಕೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿನವರು ಫೇಲಾಗುವುದು ಗ್ಯಾರಂಟಿ. ಬಿಜೆಪಿಯದು ನುಡಿದಂತೆ ನಡೆಯುವ ಪಕ್ಷ. ಭಾರತ, ಕರ್ನಾಟಕವನ್ನು ಉಳಿಸಲು ಮೋದಿಯವರಿಗೆ ಮತ ಕೊಡಿ ಎಂದು ವಿನಂತಿಸಿದರು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರ ಪ್ರಮುಖ ಮುಖಂಡರು ರೋಡ್ ಷೋದಲ್ಲಿ ಭಾಗವಹಿಸಿದ್ದರು.

ದೇಶದ ಜನ ಸ್ವಾವಲಂಬಿಯಾಗಲು ಮೋದಿಯವರು ಅನೇಕ ಸ್ಕೀಮ್ ಕೊಟ್ಟಿದ್ದಾರೆ: ಪ್ರಹ್ಲಾದ್ ಜೋಶಿ

ಪಾಕಿಸ್ತಾನ ಕೂಡ ಹೆದರುವಂತ ಮಹಾನ್ ವ್ಯಕ್ತಿ ಮೋದಿ: ಬಿ.ಎಸ್.ಯಡಿಯೂರಪ್ಪ

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಂತ್ರಸ್ತೆಯ ಅತ್ತೆಯಿಂದ ಸ್ಪೋಟಕ ಹೇಳಿಕೆ..

- Advertisement -

Latest Posts

Don't Miss