ಡಿಕೆಶಿ ಭೇಟಿ, ಮಾತುಕತೆ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದಿಷ್ಟು..

Hubballi News: ಡಿಸಿಎಂ ಡಿ.ಕೆ.ಶಿವಕುಮಾರ ಭೇಟಿ‌ ನಂತರ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿದ್ದು, ಡಿಕೆಶಿ ಶಿವಕುಮಾರ ಅವರ ಜೊತೆ ಔಪಚಾರಿಕವಾದ ಮಾತುಕತೆಯಾಗಿದೆ. ಉತ್ತರ ಕರ್ನಾಟಕ ಭಾಗದ ಸಂಘಟನೆ ಬಗ್ಗೆ ಡಿಕೆಶಿ ಸಂತೋಷ ವ್ಯಕ್ತಪಡಿಸಿದ್ರು.

ಮುಂಬರುವ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಪಕ್ಷವನ್ನ ಇನ್ನೂ ಹೆಚ್ಚಿನ ರೀತಿಯಲ್ಲಿ ಬಲ‌ಪಡಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಸೌಹಾರ್ದತೆಯಿಂದ ನಾವು ಚರ್ಚೆ ಮಾಡಿದ್ದೇವೆ. ಚುನಾವಣಾ ತಯಾರಿ ಬಗ್ಗೆ ಕೆಲ ಮಾತುಕತೆ ನಡೆಸಿದ್ದೇವೆ. ಅವರೂ ಸಹ ಕೆಲವು ಸಲಹೆ ಸೂಚನೆಗಳನ್ನ ನೀಡಿದ್ದಾರೆ. ಪಕ್ಷ ನನ್ನ ಜೊತೆಗಿದೆ ಅನ್ನೋ ಭರವಸೆಯನ್ನ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿ ಅನ್ನೋ‌ ಬಗ್ಗೆ ಯಾವುದೂ ಚರ್ಚೆ ಮಾಡಿಲ್ಲ. ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ಧೇವೆ. ಪಕ್ಷ ಸಂಘಟನೆ ಹಾಗೂ ಚುನಾವಣಾ ತಯಾರಿ ಬಗ್ಗೆ ಹಲವು ಚರ್ಚೆ ನಡೆಸಲಾಯಿತು ಎಂದು Jagadish Shettar ಹೇಳಿದ್ದಾರೆ.

ನೂರು ವರ್ಷ ಪೂರೈಸಲು ಸಜ್ಜಾಗಿರುವ ಕೋಲಾರದ ಸರ್ಕಾರಿ ಶಾಲೆ..

ಶಾಸಕರ ಮನೆ ಹತ್ತಿರವೇ ಕುಡುಕರ ಅಡ್ಡೆ: ಸಿಎಲ್-7 ವಿರುದ್ಧ ಗುಡುಗಿದ ಶಾಸಕ ಸ್ವರೂಪ್

ಮೋಗಿಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಇಲ್ಲದೇ ಮಕ್ಕಳು ಬೀದಿಪಾಲು..

About The Author