Hubli News: ಹುಬ್ಬಳ್ಳಿ: ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಜಗದೀಶ ಶೆಟ್ಟರ್ ಅವರ ಹೆಸರೇ ಇನ್ನೂ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಬೆಳಗಾವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ ಶೆಟ್ಟರ್ ಅವರ ಹೆಸರೇ ಇದೆ. ಅವರೂ ಅಲ್ಲಿ ಸ್ಪರ್ಧೆ ಮಾಡುವುದಾಗಿ ಒಪ್ಪಿದ್ದಾರೆ ಎಂದು ತಿಳಿಸಿದರು.
ತಮಗೆ ಗೊತ್ತಿರುವ ಹಾಗೆ ಬಿಜೆಪಿ ಲೀಸ್ಟ್ ಅಲ್ಲಿ ಸದ್ಯ ಜಗದೀಶ ಶೆಟ್ಟರ್ ಅವರ ಹೆಸರೇ ಮುಂಚೂಣಿ ಇದೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಜೋಶಿ ಪ್ರತಿಕ್ರಿಯೆಯಿಸಿದರು.
ಜೆಡಿಎಸ್ 3 ಕ್ಷೇತ್ರ ಕೇಳೋದು ಸಹಜ:
ರಾಜ್ಯದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 3 ಕ್ಷೇತ್ರಗಳನ್ನು ಕೇಳುವುದು ಸಹಜವೇ ಇದೆ. ಈ ಬಗ್ಗೆ ಇನ್ನೂ ಯಾವುದು ಫೈನಲ್ ಆಗಿಲ್ಲ. ಸದ್ಯದಲ್ಲೇ ಪಕ್ಷದ ವರಿಷ್ಟರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪ್ರಹ್ಲಾದ ಜೋಶಿ ಹೇಳಿದರು.
ರಾಜಕೀಯದ ನಡುವೆಯೂ ಧಾರ್ಮಿಕ ಕಾರ್ಯದಲ್ಲಿ ಜೋಶಿ ಭಾಗಿ…
ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ರಾಜಕೀಯ ಮಾತ್ರವಲ್ಲ ಧರ್ಮ ಅನುಸರಣೆಯಲ್ಲೂ ಸದಾ ಮುಂದಿದ್ದಾರೆ. ಯಾವತ್ತೂ ರಾಜಕೀಯ ಸಭೆ, ಸಮಾರಂಭಗಳಂತೆ ಧಾರ್ಮಿಕ ಸಮಾರಂಭಗಳಲ್ಲೂ ಅಷ್ಟೇ ಶ್ರದ್ಧೆಯಿಂದ ಭಾಗಿಯಾಗುತ್ತಾರೆ.
ಇದಕ್ಕೆ ನಿದರ್ಶನ ಎಂಬಂತೆ ಶನಿವಾರ ಮಧ್ಯಾಹ್ನವಷ್ಟೇ ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಜೋಶಿ ಅವರು ಸಂಜೆ ವೇಳೆಗಾಗಲೇ ಹುಬ್ಬಳ್ಳಿಯಲ್ಲಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಧಾರ್ಮಿಕ ಧಿರಿಸಿನಲ್ಲಿ ಪ್ರತ್ಯಕ್ಷರಾದರು.
ಹುಬ್ಬಳ್ಳಿ ಭವಾನಿ ನಗರದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾದರು.
ಅಸಮಾಧಾನ ಎರಡು ಮೂರು ದಿನಗಳಲ್ಲಿ ಶಮಮಗೊಳ್ಳುತ್ತದೆ: ಬಿ.ಎಸ್.ಯಡಿಯೂರಪ್ಪ
ಚುನಾವಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ




