- Advertisement -
ಪಂಜಾಬ್: ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್ ಯುದ್ಧವಿಮಾನಕ್ಕೆ ಪಕ್ಷಿ ಡಿಕ್ಕಿಯಾದರೂ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಘಟನೆ ಹರಿಯಾಣದಲ್ಲಿ ನಡೆದಿದೆ.
ಇಲ್ಲಿನ ಅಂಬಾಲಾದಲ್ಲಿ ಜಾಗ್ವಾರ್ ಯುದ್ಧ ವಿಮಾನ ಯುದ್ಧಾಭ್ಯಾಸಕ್ಕೆಂದು ಟೇಕಾಫ್ ಆದ ಸಂದರ್ಭದಲ್ಲಿ ಪಕ್ಷಿಯೊಂದು ವಿಮಾನಕ್ಕೆ ಅಡ್ಡಿಯಾಗಿ ತಾಂತ್ರಿಕ ದೋಷ ಕಂಡುಬಂದಿದೆ. ಪಕ್ಷಿಯ ಡಿಕ್ಕಿಯಿಂದಾಗಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅಲ್ಲದೆ ವಿಮಾನದ ಇಂಜಿನ್ ಕೂಡ ಸ್ಥಗಿತಗೊಂಡು ದುರಂತವೊಂದು ಸಂಭವಿಸೋದ್ರೊಳಗಾಗಿ ಪೈಲಟ್ ವಿಮಾನದಲ್ಲಿದ್ದ ಫುಯಲ್ ಟ್ಯಾಂಕ್ ಗಳನ್ನು ಕೆಳಕ್ಕೆಸೆದು ಸಮಯಪ್ರಜ್ಞೆ ಮೆರೆದಿದ್ದಾರೆ. ಇನ್ನು ಡಿಕ್ಕಿಯಿಂದ ಹೊತ್ತಿಕೊಂಡಿದ್ದ ಕಿಡಿಯಿಂದ ಫುಯಲ್ ಟ್ಯಾಂಕ್ ಗಳು ಸ್ಫೋಟಗೊಳ್ಳುವ ಎಲ್ಲಾ ಸಾಧ್ಯತೆಗಳಿದ್ದವು ಅಲ್ಲದೆ ಯುದ್ಧ ವಿಮಾನದಲ್ಲಿ ಅಭ್ಯಾಸ ಮಾಡೋದಕ್ಕೆ ಬಾಂಬ್ ಗಳೂ ಇದ್ದವು ಎನ್ನಲಾಗಿದೆ.
- Advertisement -