Movie News: ಸ್ಟಾರ್ ಆ್ಯಂಕರ್ ಜಾನ್ವಿ ಮತ್ತು ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ಆಡಿಯೋ ರೈಟ್ಸ್, ಭಾರೀ ಮೊತ್ತಕ್ಕೆ ಸೇಲ್ ಆಗಿದೆ.
ಈಗಾಗಲೇ ತುಳು ಸಿನಿಮಾಗಳಲ್ಲಿ ನಟಿಸಿ, ಹೆಸರು ಗಳಿಸಿರುವ ರೂಪೇಶ್, ಬಿಗ್‌ಬಾಸ್ ಕನ್ನಡದ ವಿನ್ನರ್ ಕೂಡ ಆಗಿದ್ದಾರೆ. ಇನ್ನು ಆ್ಯಂಕರ್ ಜಾನ್ವಿ ಗಿಚ್ಚಿಗಿಲಿಗಿಲಿ ಮೂಲಕ, ಕಿರುತೆರೆಗೆ ಎಂಟ್ರಿ ಕೊಟ್ಟು, ಬಳಿಕ ಹಿರಿತೆರೆಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಜಾನ್ವಿಯ ಚೊಚ್ಚಲ ಚಿತ್ರವಾಗಿರುವ ಅಧಿಪತ್ರ ಸಿನಿಮಾ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ.
ಪ್ರತಿಷ್ಠಿತ ಲಹರಿ ಸಂಸ್ಥೆ ಆಡಿಯೋ ರೈಟ್ಸ್ ಖರೀದಿಸಿದ್ದು, ಮೇ 10ರಂದು ಸಿನಿಮಾ ಹಾಡಿನ ಝಲಕ್ ಮತ್ತು ಟೀಸರ್ ರಿಲೀಸ್ ಆಗಲಿದೆ. ರೂಪೇಶ್ ಶೆಟ್ಟಿ ಪೊಲೀಸ್ ಖದರ್ ತೋರಿಸಿದರೆ, ಚಯನ್ ಶೆಟ್ಟಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಪಿಓಕೆ ತಂಟೆಗೆ ಹೋದರೆ ಭಾರತದ ಮೇಲೆ ಅಣುಬಾಂಬ್ ಬೀಳುತ್ತೆ: ಫಾರೂಕ್ ಅಬ್ದುಲ್ಲಾ
ಮೇಲ್ಜಾತಿಯವರು ಪೇಪರ್ ಸೆಲೆಕ್ಟ್ ಮಾಡುವ ಕಾರಣಕ್ಕೆ ದಲಿತರು ಫೇಲ್ ಆಗುತ್ತಿದ್ದಾರೆ: ರಾಹುಲ್ ಗಾಂಧಿ




