ಇತ್ತೀಚಿಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಎಲ್ಲರಿಂದಲೂ ಹೆಚ್ಚು ಮೆಚ್ಚುಗೆ ಪಡೆದ ಸಿನಿಮಾ ಅಂದ್ರೆ ಜೈ ಭೀಮ್. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಆಗಿದ್ದ ಜೈ ಭೀಮ್ ಚಿತ್ರದಲ್ಲಿ ನಟ ಸೂರ್ಯಾ ವಕೀಲನ ಪಾತ್ರ ವಹಿಸಿದ್ದರು. ಪೊಲೀಸರಿಂದ ದಲಿತರಿಗಾಗುವ ಶೋಷಣೆ ವಿರುದ್ಧ ಹೋರಾಡುವ ವಕೀಲ, ಒಂದು ರೂಪಾಯಿ ಪಡೆಯದೇ, ನ್ಯಾಯ ದೊರಕಿಸಿಕೊಡುತ್ತಾನೆ. ಈ ಕಥೆ ಎಲ್ಲರ ಮನಸ್ಸನ್ನು ಗೆದ್ದಿತ್ತು.
ಇದೀಗ, ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಸೂರ್ಯಾ ನಟನೆಯ ಜೈ ಭೀಮ್ ಚಿತ್ರದ ಹೈ ಲೈಟ್ಸ್‌ನ್ನ 12 ನಿಮಿಷಗಳ ಕಾಲ ತೋರಿಸಲಾಗಿದೆ. ಟಿ.ಜೆ.ಜ್ಞಾನವೇಲ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಆಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, 4 ಲಕ್ಷಕ್ಕೂ ಅಧಿಕ ಜನ ಇದರ ವೀಕ್ಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೇ, ಈ ಚಿತ್ರ 2022ರ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಬೆಸ್ಟ್ ನಾನ್ ಇಂಗ್ಲೀಷ್ ಲ್ಯಾಂಗ್ವೇಜ್ ಫಿಲ್ಮ್‌ಗಾಗಿ ನಾಮಿನೇಟ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ನಟ ಸೂರ್ಯಾ, ಸಮಾಜದಲ್ಲಿ ನಡೆಯುವ ತಾರತಮ್ಯಗಳ ಬಗ್ಗೆ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರಗಳನ್ನ ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ಇವರ ಸಿನಿಮಾಗಳನ್ನ ನೋಡಿ, ಹಲವು ನಟರು ಸ್ಪೂರ್ತಿಗೊಂಡು, ನಾವೂ ಇಂಥ ಸಿನಿಮಾಗಳನ್ನ ಮಾಡಬೇಕೆಂದು ಹೇಳುತ್ತಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಸುರರೈ ಪೋಟ್ರು ಕೂಡ ಸಖತ್ ಸದ್ದು ಮಾಡಿತ್ತು.

