Thursday, June 19, 2025

Latest Posts

“ಜೇಮ್ಸ್” ಸಿನಿಮಾ ನನಗೆ ದೇವರು ಕೊಟ್ಟ ವರ..!ಶೈನ್ ಶೆಟ್ಟಿ ಮನದಾಳದ ಮಾತು..!

- Advertisement -

ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ..ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ವಿಷಯದ ಬಗ್ಗೆ ಆಸಕ್ತಿಯಿದ್ದೇ ಇರುತ್ತೆ. ಅದರಂತೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿರೋ ಸಾಕಷ್ಟು ಕಲಾವಿದರು ತಮ್ಮ ನಟನೆ ಜೊತೆ ಜೊತೆಗೆ ತಮ್ಮಿಷ್ಟದ ವೃತ್ತಿಯನ್ನೂ ಸಹ ಮಾಡ್ತಿದ್ದಾರೆ. ಅಂತವರಲ್ಲಿ ಬಿಗ್‌ಬಾಸ್ ಸೀಸನ್-೭ನ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಸಹ ಒಬ್ಬರು. ಶೈನ್ ಶೆಟ್ಟಿ ಕಿರುತೆರೆ ಧಾರವಾಹಿಗಳ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಬಿಗ್‌ಸ್ಕಿçÃನ್‌ಗೂ ಎಂಟ್ರಿ ಕೊಟ್ಟ ಶೈನ್, ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಶೈನ್ ಶೆಟ್ಟಿ ನಮ್ಮ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡ್ತಾ ತಮ್ಮಿಷ್ಟದ ವೃತ್ತಿ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಟನೆಯ ಜೊತೆಗೆ ಗಲ್ಲಿಕಿಚನ್ ನಡೆಸ್ತಿರೋ ಶೈನ್ ಶೆಟ್ಟಿ, ಈಗಾಗಲೇ ಬನಶಂಕರಿ ಹಾಗೂ ಆರ್ ಆರ್ ನಗರ ಈ ಎರಡೂ ಕಡೆ ಗಲ್ಲಿ ಕಿಚನ್‌ನ ತೆರೆದಿದ್ದಾರೆ. ನಟನೆಯಷ್ಟೇ ಹೋಟೆಲ್ ನಡೆಸುವದರ ಮೇಲೆ ಶೈನ್ ಶೆಟ್ಟಿಗೆ ಹೆಚ್ಚು ಆಸಕ್ತಿಯಿದೆ. ಇಲ್ಲಿ ತಮ್ಮ ಕುಂದಾಪುರ ಶೈಲಿಯ ವೆರೈಟಿ ಖಾದ್ಯಗಳು ಹಾಗೂ ಸಬ್ಬಕ್ಕಿ ಇಡ್ಲಿ, ಮೈಸೂರು ಮಸಾಲ ದೋಸ, ಪುಡಿ ದೋಸ ಹೀಗೇ ನಾನಾ ತರಹದ ರುಚಿಯಾಗಿರೋ ಖಾದ್ಯಗಳಿವೆ. ಇಂಟ್ರೆಸ್ಟಿAಗ್ ಅಂದ್ರೆ ಬಿಗ್‌ಬಾಸ್ ನಲ್ಲಿದ್ದಾಗ ಕಿಚ್ಚನ ಒಂದೇ ಒಂದು ಮಾತೇ ಶೈನ್ ಶೆಟ್ಟಿಗೆ ಈ ಗಲ್ಲಿ ಕಿಚನ್ ನಡೆಸಲು ಇನ್ಸಿ÷್ಪರೇಷನ್ ಆಗಿದೆ. ಕಿಚ್ಚ ಸುದೀಪ್ ಸರ್ ನನ್ನ ಆಲ್‌ಟೈಮ್ ಸಪೋರ್ಟ್ ಸಿಸ್ಟಮ್ ಅಂತಾರೆ ಶೈನ್. ಅಷ್ಟೇ ಅಲ್ಲ ಕಿಚ್ಚ ಒಂದ್ಕಡೆಯಾದ್ರೆ ಮತ್ತೊಬ್ಬ ಕಲಾವಿದ ಶೈನ್‌ಗೆ ಮಾರ್ಗದರ್ಶನ ತೋರಿದ್ದಾರೆ. ಅವರು ಮತ್ತಿನ್ಯಾರು ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಪುನೀತ್ ರಾಜ್‌ಕುಮಾರ್ ಸಿಕ್ಕಾಪಟ್ಟೆ ಫುಡ್ಡೀ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರೋ ವಿಷಯ. ಶೈನ್ ಶೆಟ್ಟಿ ಗಲ್ಲಿ ಕಿಚನ್ ನಡೆಸ್ತಿರೋ ಬಗ್ಗೆ ವಿಡಿಯೋ ನೋಡಿ ತಿಳಿಸಿಕೊಂಡಿದ್ದ ಅಪ್ಪು ಸ್ವತಃ ತಾವೇ ಶೈನ್ ಜೊತೆ ನಿಮ್ಮ ಕಿಚನ್‌ಗೆ ಒಮ್ಮೆ ಬರ್ತೀನಿ ಅಂತ ಹೇಳಿದರಂತೆ. ಈ ಒಂದೇ ಒಂದು ಮಾತಿಗೆ ತುಂಬಾನೇ ಖುಷಿ ಪಟ್ಟ ಶೈನ್ ಬನಶಂಕರಿಯ ತಮ್ಮ ಗಲ್ಲಿ ಕಿಚನ್‌ನನ್ನು ಅಪ್ಪು ಕೈಯಲ್ಲೇ ಉದ್ಘಾಟಿಸಿದರು. ಬಳಿಕ ಅಪ್ಪು ನಟನೆಯ ಸಿನಿಮಾದಲ್ಲಿ ಶೈನ್‌ಗೆ ಬಿಗ್ ಆಫರ್ ಸಿಗುತ್ತೆ, ಅದೇ ಸಿನಿಮಾನೇ ಜೇಮ್ಸ್. ಶೂಟಿಂಗ್ ಟೈಮ್‌ನಲ್ಲಿ ಅಪ್ಪು ಸರ್ ಜೊತೆ ಸಾಕಷ್ಟು ಸಮಯ ಸ್ಪೆಂಡ್ ಮಆಡಿದ್ವಿ. ಅವರೊಂದಿಗೆ ಕೆಲ ದಿನಗಳು ಜೀವಿಸಿದ್ವಿ. ಬಿಗ್ ಬಾಸ್ ಬಳಿಕ ನನಗೆ ಸಿಕ್ಕಂತ ದೊಡ್ಡ ಸಿನಿಮಾ ಇದು. ಇದು ನನಗೆ ದೇವರು ಕೊಟ್ಟ ವರ ಅಂತಾರೆ ನಟ ಶೈನ್ ಶೆಟ್ಟಿ.

ನಳಿನಾಕ್ಷಿ, ಕರ್ನಾಟಕ ನ್ಯೂಸ್

- Advertisement -

Latest Posts

Don't Miss