Friday, November 22, 2024

Latest Posts

ಜೇಮ್ಸ್” ಚಿತ್ರದಲ್ಲಿ ಕೇಳಲಿದೆ ಪುನೀತ್ ರಾಜಕುಮಾರ್ ಧ್ವನಿ

- Advertisement -

 

 

ಮಾರ್ಚ್ ಹದಿನೇಳರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಚಿತ್ರ ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್”. ದುರಾದೃಷ್ಟವಶಾತ್ ಚಿತ್ರಕ್ಕೆ ಡಬ್ಬಿಂಗ್ ನೀಡುವುದಕ್ಕೆ ಮೊದಲೇ ಅಪ್ಪು ಎಲ್ಲರನ್ನೂ ಬಿಟ್ಟು ದೂರವಾದರು. ನಂತರ ಶಿವರಾಜಕುಮಾರ್, ಪುನೀತ್ ಅವರ ಪಾತ್ರಕ್ಕೆ‌ ಧ್ವನಿ ನೀಡಿದ್ದರು. ಶಿವಣ್ಣ ಧ್ವನಿ ನೀಡಿದಾಗ ಅಭಿಮಾನಿಗಳು ಸಂತಸ ಪಟ್ಟಿದ್ದರು.

ಇದೇ 22 ರ ಶುಕ್ರವಾರದಿಂದ “ಜೇಮ್ಸ್‌” ಚಿತ್ರದಲ್ಲಿ ಪುನೀತ್ ಅವರ ಧ್ವನಿ ಕೇಳಬಹುದು. ಇಂತಹದೊಂದು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದ ಚಿತ್ರತಂಡ ಸಫಲವಾಗಿದೆ. ಹೈದರಾಬಾದ್ ನ ಪಪ್ಪು ಅವರು ತಮ್ಮ ಬಿಟ್ ಮಂತ್ರ ತಂಡದೊಂದಿಗೆ ಸೇರಿ ಈ ಹೊಸ ಆವಿಷ್ಕಾರ ಮಾಡಿದ್ದಾರೆ. ಇದು ವಿಶ್ವದಲ್ಲೇ ಮೊದಲ ಪ್ರಯತ್ನ. ಈ ನೂತನ ತಂತ್ರಜ್ಞಾನಕ್ಕೆ ಅಪ್ಪು ಅವರ ಧ್ವನಿಯೇ ನಾಂದಿಯಾಗಿದೆ.

ನಾವು ಚಿತ್ರ ಆರಂಭಕ್ಕೂ ಮೊದಲೇ ಕೆಲವು ಸಂಸ್ಥೆಗಳನ್ನು ಸಂಪರ್ಕಿಸಿ, ಚಿತ್ರೀಕರಣದ ಸಮಯದಲ್ಲಿದ್ದ ಅಪ್ಪು ಅವರ ಧ್ವನಿ ಬಳಿಸಿ ಎನ್ನಾದರೂ ಮಾಡಬಹುದಾ? ಅಂತ ಕೇಳಿದ್ದೇವು. ಆದರೆ ಏನು ಆಗಿರಲಿಲ್ಲ. ಅದೇ ಸಮಯದಲ್ಲಿ ಪಪ್ಪು ಅವರನ್ನು ಸಂಪರ್ಕ ಮಾಡಿದ್ದೆವು. ಈಗ ಆರು ದಿನಗಳ ಮುಂಚೆ ಅವರಿಂದ ಒಳ್ಳೆಯ ಉತ್ತರ ಸಿಕ್ಕಿದೆ. ನಮ್ಮ ದೇವರ ಧ್ವನಿಯನ್ನು ಮತ್ತೆ ಕೇಳುವ ಹಾಗೆ ಆಗಿದೆ ಎಂದು ನಿರ್ದೇಶಕ ಚೇತನ್ ಕುಮಾರ್ ಭಾವುಕರಾದರು.

ನಮ್ಮ ಚಿತ್ರದಲ್ಲಿ ಅಭಿನಯಿಸಿರುವ ಖ್ಯಾತ ನಟ ಶ್ರೀಕಾಂತ್ ಅವರ ಮೂಲಕ ಪಪ್ಪು ಅವರ ಪರಿಚಯವಾಯಿತು. ಅಪ್ಪು ಅವರ ಧ್ವನಿಯಿರುವ “ಜೇಮ್ಸ್” ಚಿತ್ರವನ್ನು ಅಭಿಮಾನಿಗಳು ನೋಡಬಹುದು. ಇನ್ನೂ ಐವತ್ತು ಚಿತ್ರಮಂದಿರಗಳನ್ನು ಹೆಚ್ಚು ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು ನಿರ್ಮಾಪಕ ಕಿಶೋರ್.

ಈ ಆವಿಷ್ಕಾರಕ್ಕೆ ಸಾಕಷ್ಟು ಸಮಯ ಹಿಡಿಸಿದೆ. ನಾನು ಸೇರಿದಂತೆ ನಮ್ಮ ಬಿಟ್ ಮಂತ್ರ ಸದಸ್ಯರು ಪರಿಶ್ರಮದಿಂದ ಈ ನೂತನ ಆವಿಷ್ಕಾರ ಸಫಲವಾಗಿದೆ. ನನಗೆ ನಟ ಶ್ರೀಕಾಂತ್ ಸರ್ ಫೋನ್ ಮಾಡಿ ಇದು ರಾಜಕುಮಾರ್ ಕುಟುಂಬದ ಚಿತ್ರ . ಪುನೀತ್ ಅವರ ಕೊನೆಯ ಚಿತ್ರ. ಈ ಚಿತ್ರದ ಕೆಲಸ ಮಾಡುವಂತೆ ಹೇಳಿದರು. ಆದರೆ ನಾನು ಆಗ ಪ್ರಭಾಸ್ ಅವರ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಪ್ರಭಾಸ್ ಅವರ ಬಳಿ ಈ ವಿಷಯ ಹೇಳಿದಾಗ “ಜೇಮ್ಸ್” ಚಿತ್ರದ ಕೆಲಸವನ್ನು ಮೊದಲು ಮಾಡಬೇಕೆಂದರು. ಅಪ್ಪು ಅವರ ಹಿಂದಿನ ಸಾಕಷ್ಟು ಚಿತ್ರಗಳ ಹಾಗೂ ಅವರ ಸಂದರ್ಶನಗಳ ಧ್ವನಿಯನ್ನು ತರಿಸಿಕೊಂಡು ಈ ಹೊಸ ಪ್ರಯೋಗ ಮಾಡಿದ್ದೇವೆ. ಮೊದಲಿಗೆ ಕನ್ನಡದಲ್ಲಿ ಈ ನೂತನ ಪ್ರಯೋಗಕ್ಕೆ ಚಾಲನೆ ದೊರಕಿದೆ. ಅದರಲ್ಲೂ ಈ ಹೊಸ ಆವಿಷ್ಕಾರ ಅಪ್ಪು ಅವರಿಂದಲೇ ಆರಂಭವಾಗಿರುವುದು ಸಂತಸ ತಂದಿದೆ.. ಇಡೀ ಪ್ರಪಂಚದಲ್ಲೇ ಈ ರೀತಿಯ ಆವಿಷ್ಕಾರ ಮೊದಲು ಎನ್ನಬಹುದು ಎಂದು ಪಪ್ಪು ತಿಳಿಸಿದರು.

- Advertisement -

Latest Posts

Don't Miss