www.karnatakatv.com:ನಾವೇಲ್ಲಾ ಇಂದು ನೆಮ್ಮದಿಯಾಗಿ ಇರಲು ಮುಖ್ಯಕಾರಣವೆಂದರೆ ಅದು ಸೈನಿಕರು. ಬಿಸಿಲು,ಮಳೆ,ಗಾಳಿ,ಚಳಿ ಯಾವುದನ್ನು ಲೆಕ್ಕಿಸದೆ ಗಡಿಯಲ್ಲಿನಿಂತು ದೇಶದೊಳಗಿರುವ ಜನರನ್ನು ರಕ್ಷಿಸುವ ಸೈನಿಕನ ತ್ಯಾಗ ಪರಿಶ್ರಮಕ್ಕೆ ಒಂದು ಸಲಾಮ್ ಹೇಳಲೆಂದೇ ಬಂದಿದೆ “ಜಯಹೇ” ಕನ್ನಡ ಆಲ್ಬಮ್ ಸಾಂಗ್. ಸೈನಿಕರು ನಮಗಾಗಿ ಮಾಡಿರುವ ತ್ಯಾಗ,ಬಲಿದಾನ ಇವೆಲ್ಲವುಗಳಿಗೆ ಒಂದು ಕೃತಗ್ನತೆ ಸಲ್ಲಿಸಲು ಈ ಹಾಡನ್ನು ರಚಿಸಿದ್ದಾರೆ. ಒಂದು ಸುಂದರ ಪರಿಕಲ್ಪನೆಯೊಂದಿಗೆ ಜಯಹೇ ಮೂಡಿಬಂದಿದೆ.
ಆದರ್ಶ ಐಯ್ಯಂಗಾರ್ ಈ ಆಲ್ಬುಮ್ ಸಾಂಗ್‌ಗೆ ಧ್ವನಿಯಾಗಿದ್ದಾರೆ. ಮೂಲತಃ ಶಿವಮೊಗ್ಗದವರಾದರು ಅಮೇರಿಕಾದಲ್ಲಿ ಕಾರ್ಯನಿವೃತ್ತ ನೆಲೆಸಿದ್ದಾರೆ. ಬೇರೆಕೆಲಸದಲ್ಲಿ ತೊಡಗಿದ್ದರು ಹಾಡುಹಾಡುವ ಫ್ಯಾಷನ್ ನಿಂದಾಗಿ ಅಮೇರಿಕಾದಲ್ಲೇ ಸ್ಟುಡಿಯೋವನ್ನು ಕೂಡ ಮಾಡಿಕೊಂಡಿದ್ದಾರೆ. ತಾವು ಮಾಡುವ ಆಲ್ಬುಮ್ ಗಳಿಂದ ಜನರಿಗೆ ಒಳ್ಳೆಯ ಕಂಟೆoಟ್ ಜೊತೆಗೆ ಉತ್ತಮ ದೃಶ್ಯವನ್ನು ಕಟ್ಟಿಕೊಡುವ ಸಲುವಾಗಿ ಕೆಲಸದಲ್ಲಿ ಬಿಡುವುಮಾಡಿಕೊಂಡು ಭಾರತಕ್ಕೆ ಬಂದು ಆಲ್ಬುಮ್ ಕೆಲಸಗಳೆಲ್ಲವನ್ನು ಮಾಡಿದ್ದಾರೆ. ಹೆಚ್ಚಿನದಾಗಿ ತಮ್ಮದೆ ಸಂಸ್ಥೆಯಾದ ಶ್ರೀಕೃಷ್ಣ ಪ್ರೋಡಕ್ಷನ್ಸ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಮರವಂತೆ ಎಂಬುವವರು ಸಾಹಿತ್ಯ ಬರೆದಿದ್ದು, ಹೇಮಂತ್ ಜೋಹಿಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಹಾಗೂ ಗುರುಪ್ರಸಾದ್, ರಕ್ಷಿತ್ ತೀರ್ಥಹಳ್ಳಿ, ಗುರುಪ್ರಸಾದ್, ಸುದಿರ್,ಗಣೇಶ್ ಬಿರಾದರ್,ಗುರುದತ್ ಬಡಿಗೆರೆ ಇವೆರೆಲ್ಲರು ಸೇರಿ “ಜಯಹೇ” ಸಾಂಗ್ ಮಾಡಿದ್ದಾರೆ.




