ಶಿರಾ,: ಇಂದು ಶಿರಾದಲ್ಲಿ ಜೆಡಿಎಸ್ ನ ರಾಜ್ಯ ಕೋರ್ ಕಮಿಟಿ ಸದಸ್ಯರು ಮತ್ತು ತಾಲೂಕು ಅಧ್ಯಕ್ಷರಾದ ಆರ್. ಉಗ್ರೇಶ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಕಾರ್ಯಕ್ರಮದಲ್ಲಿ ಅವರ ಅಭಿಮಾಗಳು ಹಣ್ಣಿಗಾಗಿ ಮುಗಿಬಿದ್ದ ಘಟನೆ ನಡೆಯಿತು.
ಚುನಾವಣೆಗೆ ಇನ್ನೇನು 6 ತಿಗಂಳು ಬಾಕಿ ಇದೆ. ಹೀಗಿರುವಾಗ ಶಕ್ತಿ ಪ್ರದರ್ಶನಕ್ಕೆ ಮುಂದಾದ ರಾಜಕೀಯ ನಾಯಕರು ದಾನ ಧರ್ಮ, ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ರೀತಿ ಶಿರಾದಲ್ಲಿ ಉಗ್ರೇಶ್ ಬರ್ತ್‌ಡೇ ಸಂಬಂಧ, ಅವರ ಬೆಂಬಲಿಗರು ಎಲ್ಲರಿಗೂ ಹಂಚಲು ಹಣ್ಣನ್ನು ತಂದಿದ್ದಾರೆ. ಈ ವೇಳೆ ಹಣ್ಣನ್ನು ಪಡೆಯಲು ಜನ ಮುಗಿಬಿದ್ದಿದ್ದು, ಈ ವೇಳೆ ತಳ್ಳಾಟ , ನೂಕಾಟ ನಡೆದಿದೆ.
ಈ ವೇಳೆ ಹಣ್ಣುಗಳು ರಸ್ತೆಗೆ ಬಿದ್ದಿದ್ದು, ರಸ್ತೆಗೆ ಬಿದ್ದಿದ್ದ ಹಣ್ಣನ್ನು ಆಯ್ದುಕೊಳ್ಳಲು ಜನ ಮುxದಾಗಿದ್ದು, ವಾಹನ ಸವಾರರು ರಸ್ತೆಯಲ್ಲೇ ನಿಂತು ಪರದಾಡಬೇಕಾಯಿತು. ಹಾಗಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಟ್ರಾಫಿಕ್ ಜಾಮ್ ತೆರವುಗೊಳಿಸಲು ಹರಸಾಹಸಪಟ್ಟರು.
ನೀವು ಸಪ್ಲಿಮೆಂಟರಿಗಳನ್ನೂ ತೆಗೆದುಕೊಳ್ಳುತ್ತಿರುವಿರಾ..? ಆದರೆ ನೀವು ಇವುಗಳನ್ನು ಖಚಿತವಾಗಿ ತಿಳಿದಿರಬೇಕು…