ಮಂಡ್ಯ: ದೇವೇಗೌಡ ಅಂದರೆ ದೇಶದ ದೊಡ್ಡ ಶಕ್ತಿ. ಅಂತಹವರನ್ನ ಸುಮಲತಾಗೆ ಯಾವ ವಿಷಯದಲ್ಲೂ ಹೋಲಿಸಲು ಆಗಲ್ಲ ಅಂತ ಸಂಸದೆ ಸುಮಲತಾ ಅಂಬರೀಶ್ ರನ್ನ ಮಳವಳ್ಳಿ ಶಾಸಕ ಅನ್ನದಾನಿ ಜರಿದಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಅನ್ನದಾನಿ, ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೇವೇಗೌಡರು ಹೋರಾಟಕ್ಕೆ ಶಕ್ತಿ ತುಂಬಿದ್ದರು. ದೇವೇಗೌಡ್ರು ಅಂದ್ರೇನೇ ದೇಶದ ಒಂದು ದೊಡ್ಡ ಶಕ್ತಿ. ಅವರು ಸಂಸತ್ ಪ್ರವೇಶಿಸಿದ್ರೆ ಕಾವೇರಿ ಹೋರಾಟಕ್ಕೆ ಶಕ್ತಿ ಇರುತ್ತಿತ್ತು. ಆದ್ರೆ ಸುಮಲತಾ ಸಂಸತ್ ಗೆ ಹೋಗಿದ್ದಾರೆ. ದೇವೇಗೌಡರೆಲ್ಲಿ, ಇದೀಗ ಹೊಸದಾಗಿ ರಾಜಕಾರಣಕ್ಕೆ ಬಂದಿರೋ ಸುಮಲತಾ ಎಲ್ಲಿ…ಅವರನ್ನು ದೇವೇಗೌಡರಿಗೆ ಯಾವ ವಿಷಯದಲ್ಲೂ ಹೋಲಿಸಲು ಆಗಲ್ಲ ಅಂತ ಅನ್ನದಾನಿ ಲೇವಡಿ ಮಾಡಿದ್ದಾರೆ.
ಇನ್ನು ಸುಮಲತಾಗೆ ರಾಜಕೀಯ ಅನುಭವವೇ ಇಲ್ಲ, ಅವರ ಪತಿ ದಿ.ಅಂಬರೀಶ್ ರವರು ಕಾವೇರಿ ವಿಚಾರವಾಗಿ ಸಂಸತ್ ನಲ್ಲಿ ಧ್ವನಿ ಎತ್ತಿದ್ದರು. ಸುಮಲತಾ ಕೂಡ ಅವರಂತೆ ಕಾವೇರಿ ವಿಚಾರವಾಗಿ ಧ್ವನಿ ಎತ್ತಲಿ ಅಂತ ಅನ್ನದಾನಿ ಹೇಳಿದ್ದಾರೆ.
ಹಾಗೆ ಮಂಡ್ಯದಲ್ಲಿ ನಿಖಿಲ್ ಕುಮಾರ್ ಗೆದ್ದಿದ್ದರೆ ಮಂಡ್ಯದಲ್ಲಿ ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ಆದ್ರೆ ಜನರ ತೀರ್ಪನ್ನು ನಾವು ಗೌರವಿಸಲೇ ಬೇಕು ಅಂತ ಶಾಸಕ ಅನ್ನದಾನಿ ಹೇಳಿದ್ದಾರೆ.
25 ಸ್ಥಾನ ಗೆಲ್ಲಿಸಿದ್ದಕ್ಕೆ ರಾಜ್ಯಕ್ಕೆ ಇದೇನಾ ಬಹುಮಾನ…? ತಪ್ಪದೇ ಈ ವಿಡಿಯೋ ನೋಡಿ