Monday, September 9, 2024

Latest Posts

‘ಚಲುವರಾಯಸ್ವಾಮಿ ಬಿಜೆಪಿ ಸೇರೋದು ಗ್ಯಾರೆಂಟಿ’- ಜೆಡಿಎಸ್ ಶಾಸಕ ಕಿಡಿ

- Advertisement -

ಮಂಡ್ಯ: ಜೆಡಿಎಸ್ ಶಾಸಕ ಸುರೇಶ್ ಗೌಡ ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಮೈತ್ರಿ ಸರ್ಕಾರದ ವಿರುದ್ಧವೇ ಹೇಳಿಕೆ ನೀಡೋ ಚಲುವರಾಯಸ್ವಾಮಿ ಬಿಜೆಪಿ ಸೇರೋದು ಖಚಿತ ಅಂತ ಕಿಡಿ ಕಾರಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಗೌಡ, ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟ್ ಅನ್ನೋ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ರು. ಇವರ ಜೊತೆ ಕೆಲಸ ಮಾಡುವಾಗ ಅದು ಸದ್ಗುಣದ ಕೆಲಸ, ಇವರನ್ನು ಬಿಟ್ಟು ಮಾಡಿದರೆ ಅದು ರಾಜಕೀಯ ಸ್ಟಂಟ್ ಆಗುತ್ತಾ ಅಂತ ಲೇವಡಿ ಮಾಡಿದ್ದಾರೆ. ಅಲ್ಲದೆ ಇವನಿಂದ ಪಾಠ ಕಲಿಯೋ ಅಗತ್ಯ ನಮಗಿಲ್ಲ ಅಂತ ಏಕವಚನದಲ್ಲಿ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಹರಿಹಾಯ್ದಿದ್ದಾರೆ.

ಇನ್ನು ಚಲುವರಾಯಸ್ವಾಮಿ ಬಿಜೆಪಿ ಸೇರೋದು ಗ್ಯಾರೆಂಟಿ, ಆಗಲೇ ಒಂದು ಹೊಸಲು ದಾಟಿದವರು ಇನ್ನೊಂದು ಹೊಸಲು ದಾಟೋದಿಲ್ಲವೇ ಅಂತ ಚಲುವರಾಯಸ್ವಾಮಿ ಪಕ್ಷಾಂತರ ಕುರಿತಂತೆ ಲೇವಡಿ ಮಾಡಿದ್ರು. ಅಲ್ಲದೆ ಇತಂಹವರಿಗೆ ಮಾನ ಮರ್ಯಾದೆ ಇಲ್ಲ. ಕಾಂಗ್ರೆಸ್ ಪಕ್ಷದ ನೆಮ್ಮದಿಯನ್ನು ಹಾಳು ಮಾಡಿ ಕುಲಗೆಡಿಸುತ್ತಿದ್ದಾರೆ ಅಂತ ಸುರೇಶ್ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

ಯಾರ್ ಯಾರಿಗೆ ಸಚಿವ ಸ್ಥಾನ ಸಿಗುತ್ತೆ…?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Yh3aNgduDKI

- Advertisement -

Latest Posts

Don't Miss