ಬೆಂಗಳೂರು: ಚಿನ್ನದ ಮೇಲೆ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡ ಜುವೆಲ್ಲರಿ ಕಂಪನಿ ಮಾಲೀಕ ಪರಾರಿಯಾಗಿರೋ ಪರಿಣಾಮ ಸಾವಿರಾರು ಮಂದಿ ಗ್ರಾಹಕರು ತಮ್ಮ ಹಣ ವಾಪಸ್ ಕೊಡಿಸಿ ಅಂತ ಶೋ ರೂಂ ಮುಂದೆ ಬೊಬ್ಬೆಹೊಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಶಿವಾಜಿನಗರ ಮತ್ತು ಜಯನಗರದಲ್ಲಿ ತನ್ನ ಶಾಖೆ ತೆರೆದು ಸಾವಿರಾರು ಸಂಖ್ಯೆಯ ಗ್ರಾಹಕರನ್ನು ಹೊಂದಿರೋ ಐಎಂಎ ಜುವೆಲ್ಲರ್ಸ್ ತನ್ನ ಗ್ರಾಹಕರಿಗೆ ಚಿನ್ನದ ಮೇಲೆ ಹೂಡಿಕೆ ಮಾಡೋದಾಗಿ ತಿಳಿಸಿ ನಿಮಗೆ ತಿಂಗಳಿಗೆ ಇಂತಿಷ್ಟು ಹಣ ನೀಡುತ್ತೇವೆ ಅಂತ ಹೇಳಿತ್ತು. ಅದರಂತೆಯೇ ಗ್ರಾಹಕರಿಗೆ ಇಷ್ಟೂ ವರ್ಷ ಪ್ರತಿ ತಿಂಗಳು ಹಣ ನೀಡಲಾಗುತ್ತಿತ್ತು. ಆದ್ರೆ ಕೆಲ ತಿಂಗಳಿನಿಂದ ಗ್ರಾಹಕರಿಗೆ ಬರುತ್ತಿದ್ದ ತಿಂಗಳ ಹಣ ಕಡಿಮೆಯಾಗಿತ್ತು. ಇದಕ್ಕೆ ಕಂಪನಿ ಮಾಲೀಕ ಸಮಜಾಷಿ ನೀಡಿ ಸುಮ್ಮನಾಗಿಸಿದ್ರು. ಆದ್ರೆ ಇದೀಗ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ನಾಪತ್ತೆಯಾಗಿದ್ದಾರೆ. ಅಲ್ಲದೆ ಅವರದ್ದೇ ಆದ ಧ್ವನಿ ಎನ್ನಲಾದ ಆಡಿಯೋದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ಇದು ಹೂಡಿಕೆ ಮಾಡಿದ್ದ ಸಾವಿರಾರು ಗ್ರಾಹಕರಲ್ಲಿ ಆತಂಕ ಮೂಡಿಸಿದ್ದು ತಮ್ಮ ಹಣ ವಾಪಸ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ.
ಮೊಹಮ್ಮದ್ ಮನ್ಸೂರ್ ಖಾನ್ ಪತ್ತೆಗೆ ಮಾಹಿತಿ ಸಂಗ್ರಹ. ನಿಗೂಢವಾಗಿ ನಾಪತ್ತೆಯಾದ ಮಳಿಗೆ ಮಾಲೀಕ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ನಲ್ಲಿ ತಿಳಿಸಿ ನಾಪತ್ತೆಯಾಗಿದ್ದಾನೆ. ಇನ್ನು ಆಡಿಯೋದಲ್ಲಿ ಮಳಿಗೆ ಮಾಲೀಕ ಮುನ್ಸೂರ್, ರಾಜಕಾರಣಿಯೊಬ್ಬರು ತಮಗೆ 400 ಕೋಟಿ ರೂಪಾಯಿ ವಂಚಿಸಿದ್ದಾರೆ. ಅಲ್ಲದೆ ರಾಜಕೀಯ ಮುಖಂಡರು , ಸರ್ಕಾರದ ವಿರುದ್ಧ ಆಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ತಮ್ಮಲ್ಲಿ ಹೂಡಿಕೆ ಮಾಡಿರೋ ಗ್ರಾಹಕರಿಗೆ ತನ್ನ ಆಸ್ತಿ ಮಾರಾಟ ಮಾಡಿ ಅವರ ಹಣ ವಾಪಸ್ ನೀಡುವಂತೆ ಮನ್ಸೂರ್ ಖಾನ್ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ನಾಪತ್ತೆಯಾಗಿರೋ ಮಾಲೀಕ ಮನ್ಸೂರ್ ಖಾನ್ ಪತ್ತೆಗಾಗಿ ಪೊಲೀಸರು ಶೋಧ ನೆಡೆಸಿದ್ದು, ಏರ್ ಪೋರ್ಟ್ ಬಂದರುಗಳಿಗೆ ಲುಕೌಟ್ ನೋಟೀಸ್ ಜಾರಿ ಮಾಡಲಾಗಿದೆ.

ಜಬರ್ದಸ್ತ್ ಆಗಿದೆ ಪಾನಿಪುರಿ ಕಿಟ್ಟಿ ರ್ಯಾಂಪ್ ವಾಕ್…! ಮಿಸ್ ಮಾಡದೇ ಈ ವಿಡಿಯೋ ನೋಡಿ