- Advertisement -
ಚಿತ್ರದುರ್ಗ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಚುನಾವಣೆಗೂ ಮುನ್ನವೇ ಶುಭಾರಂಭ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರಸಭೆಗೆ 7ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿ ಪಾಂಡುರಂಗ ಅವಿರೋಧ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಇಂದು ಪಾಂಡುರಂಗ ವಿರುದ್ಧ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಈರಲಿಂಗೇಗೌಡ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಹೀಗಾಗಿ ಪ್ರತಿಸ್ಪರ್ಧಿಯೇ ಇಲ್ಲದೆ ಜೆಡಿಎಸ್ ಅಭ್ಯರ್ಥಿ ಎ.ಪಾಂಡುರಂಗ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಶುಭಾರಂಭ ಮಾಡಿದೆ.

ಚುನಾವಣಾ ಸಮೀಕ್ಷಾ ವರದಿ ಬಂದ ಮೇಲೆ ಎಲ್ಲಿ ಹೋದ್ರು ಸಚಿವ ಡಿಕೆಶಿ…? ಇದನ್ನ ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ.
- Advertisement -