ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಯಾವುದೇ ಹಕ್ಕಿಲ್ಲ ಅಂತ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿರೋ ಬೆನ್ನಲ್ಲೇ ಇದೀಗ ದೋಸ್ತಿಗೆ ಜೊತೆ ದನಿಗೂಡಿಸಿರೋ ಜೆಡಿಎಸ್ ಕೂಡ ವಿರೋಧ ವ್ಯಕ್ತಪಡಿಸಿದೆ. ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಸಮ್ಮತಿಸಿರೋದು ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ ಅಂತ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಮಾಣವಚನ ಸ್ವೀಕರಿಸಲು ಯಡಿಯೂರಪ್ಪ ಸಂಜೆ 6 ಗಂಟೆ ಆಗೋದನ್ನೇ ಕಾಯುತ್ತಾ ಕುಳಿತಿದ್ರೆ, ಇತ್ತ ದೋಸ್ತಿ ಮಾತ್ರ ಇದಕ್ಕೆ ಅವಕಾಶ ನೀಡಲೇ ಬಾರದೆಂದು ಆಕ್ಷೇಪಿಸಿದೆ. ಈ ಕುರಿತು ಟ್ವೀಟ್ ಮಾಡಿರೋ ಜೆಡಿಎಸ್ ರಾಜ್ಯ ಘಟಕ, ವಿಧಾನಸಭೆಯ ಸಂಖ್ಯಾಬಲ 222. ಇನ್ನು ಬಹುಮತಕ್ಕೆ ಬೇಕಾಗಿರೋದು 112 ಸಂಖ್ಯಾಬಲ. ಆದರೆ ಬಿಜೆಪಿಯವರ ಬಳಿ ಕೇವಲ 105ರಷ್ಟು ಮಾತ್ರ ಸಂಖ್ಯಾಬಲವಿದ್ದು ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಇದಕ್ಕೆ ರಾಜ್ಯಪಾಲರೂ ಕೂಡ ಬಹುಮತದ ಸರ್ಕಾರ ರಚನೆ ಕುರಿತಾಗಿ ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಇವರಿಗೆ ಸಮ್ಮತಿ ನೀಡಿದೆ. ರಾಜ್ಯಪಾಲರ ಈ ನಿರ್ಧಾರ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಅಂತ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ದೋಸ್ತಿಗಳು ರಾಜ್ಯಪಾಲರ ಮೇಲೆ ಈ ರೀತಿ ಅಸಮಾಧಾನ ವ್ಯಕ್ತಪಡಿಸಿರೋದು ಇದೇ ಮೊದಲೇನವ್ವ, ವಿಶ್ವಾಸಮತ ಯಾಚನೆ ಶೀಘ್ರವೇ ಆಗಬೇಕು ಅಂತ ಸ್ಪೀಕರ್ ಗೆ ಮನವಿ ಮಾಡಿಕೊಂಡ ಬಳಿಕವೂ ಪ್ರಯೋಜನವಾಗ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಪಾಲರ ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ರಾಜ್ಯಪಾಲರು ಸಹ ಬಿಜೆಪಿ ಮನವಿಗೆ ಸ್ಪಂದಿಸಿ ಕೂಡಲೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಅಂತಲೂ ಸೂಚನೆ ನೀಡಿದ್ದು. ಇದಕ್ಕೆ ಕಾಂಗ್ರೆಸ್-ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ಕೆಲಸ ಮಾಡ್ತಿದ್ದಾರೆ ಅಂತ ಆರೋಪಿಸಿತ್ತು.