Wednesday, November 29, 2023

Latest Posts

‘ಯಾರೆಲ್ಲಾ ಆಟ ಆಡ್ತಿದ್ದಾರೆ ಅಂತ ಗೊತ್ತು’- ಕೈ ನಾಯಕರ ಮೇಲೆ ಗರಂ ಆದ ಗೌಡ್ರು…!

- Advertisement -

ಬೆಂಗಳೂರು: ಮೈತ್ರಿ ಸರ್ಕಾರವನ್ನು ಹೇಗಾದ್ರೂ ಮಾಡಿ ಉಳಿಸಿಕೊಳ್ಳಬೇಕೆನ್ನೋ ನಿಟ್ಟಿನಲ್ಲಿ ಕಾಂಗ್ರೆಸ್ ಶತಪ್ರಯತ್ನ ಮಾಡ್ತಿದೆ. ದೇವೇಗೌಡರೊಂದಿಗೆ ಈ ಕುರಿತಾಗಿ ಚರ್ಚೆ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡ ಕೈ ನಾಯಕರಿಗೆ ಕ್ಲಾಸ್ ತೆಗೆದೂಕೊಂಡಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡೋದಕ್ಕೆ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡು ರಚಿಸಿರೋ ಮೈತ್ರಿ ಸರ್ಕಾರ ತನ್ನ ಆಯಸ್ಸು ಕಳೆದುಕೊಳ್ಳೋ ಎಲ್ಲಾ ಲಕ್ಷಣ ಗೋಚರವಾಗ್ತಿದೆ. ಆದರೂ ಸಹ ಹತಾಶರಾಗದ ಕಾಂಗ್ರೆಸ್ ನಾಯಕರು ಕಡೇ ಕ್ಷಣದ ಪ್ರಯತ್ನ ಮಾಡ್ತಿದ್ದಾರೆ. ಕೆಲ ಮುಖಂಡರೊಂದಿಗೆ ಭೇಟಿ ತಮ್ಮನ್ನು ಮಾಡಿರುವ ಸಚಿವ ಡಿ.ಕೆ ಶಿವಕುಮಾರ್ ಮೇಲೆ ದೇವೇಗೌಡರು ಗರಂ ಆಗಿದ್ದಾರೆ. ನಾವು ಬೇಡ ಅಂದ್ರೂ ಕುಮಾರಸ್ವಾಮಿಯವರನ್ನ ಸಿಎಂ ಮಾಡಿದ್ರಿ. ಈಗ ರಾಜೀನಾಮೆ ಕೊಟ್ಟು ಮೈತ್ರಿ ಅಸ್ಥಿರಗೊಳಿಸೋಕೆ ಕಾರಣರಾಗಿರೋ ಶಾಸಕರು ಯಾರ ಶಿಷ್ಯಂದಿರು ಅಂತ ಪ್ರಶ್ನಿಸಿದ ಗೌಡರು, ಯಾರೆಲ್ಲಾ ಇದರ ಹಿಂದೆ ಆಟವಾಡ್ತಿದ್ದಾರೆ ಅಂತ ನಮಗೆ ಗೊತ್ತಿಲ್ವಾ ಅಂತ ಕಿಡಿ ಕಾರೋ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಆರೋಪಿಸಿದ್ರು. ಕಾಂಗ್ರೆಸ್ ನಾಯಕರೇ ನಮಗೆ ತೊಂದರೆ ಕೊಡೋದಕ್ಕೆ ಶುರುಮಾಡಿದ್ರು. ಹೀಗಾಗಿ ನಮ್ಮ ಮುಂದಿನ ನಡೆ ಬಗ್ಗೆ ಸಿಎಂ ಕುಮಾರಸ್ವಾಮಿ ವಿದೇಶದಿಂದ ವಾಪಸ್ ಬಂದ ನಂತರ ತೀರ್ಮಾನ ಮಾಡ್ತೇವೆ ಅಂತ ದೇವೇಗೌಡರು ಸಚಿವ ಡಿಕೆಶಿ ಎದುರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ವಿದೇಶ ಪ್ರವಾಸದಲ್ಲಿರೋ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದು ಸಂಜೆ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ.

ಸೈನಿಕನ ಸೇಡು, ಸರ್ಕಾರಕ್ಕೆ ಕೇಡು..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=WvQ-eJ8mw8M
- Advertisement -

Latest Posts

Don't Miss