Wednesday, July 2, 2025

Latest Posts

Jeeni Dileep ಸಿರಿಧಾನ್ಯಗಳ ಸಿರಿವಂತನಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ..!

- Advertisement -

ರುದ್ರಾಕ್ಷ ಪೌಂಡೇಶನ್ (Rudraksha Foundation) ಆಶೀರ್ವಾದ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (Aashirvad Education and Charitable Trust) ವತಿಯಿಂದ ಸಾಧಕರನ್ನು ಗುರುತಿಸಿ ಡಾ. ಎಪಿಜೆ ಅಬ್ದುಲ್ ಕಲಾಂ ಇಂಟರ್ ನ್ಯಾಷನಲ್ ಅವಾರ್ಡ್ (Dr. APJ Abdul Kalam International Award) 2022 ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಳಿ ಇರುವ ಆರ್ ಜಿ ರಾಯಲ್ ಹೋಟೆಲ್ ನಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ನ ಸಂಸ್ಥಾಪಕರಾದ ದಿಲೀಪ್ ಕುಮಾರ್ (Dilip Kumar, Founder of jeeni Millet Health Mix) ಹಾಗೂ ಲಹರಿ ರೆಕಾರ್ಡಿಂಗ್ ಮತ್ತು ಮ್ಯೂಸಿಕ್ ಕಂಪನಿಯ ಲಹರಿ ವೇಲು (lahari velu) ಅವರನ್ನು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸಂಸ್ಥಾಪಕ ದಿಲೀಪ್ ಕುಮಾರ್ ಮಾತನಾಡಿ ಇಬ್ಬರು ಮಹಾನ್ ವ್ಯಕ್ತಿಗಳು, ಅಬ್ದುಲ್ ಕಲಾಂ (Abdul Kalam) ಹಾಗೂ ವಾಜಪೇಯಿ (Vajpayee), ಎಪಿಜೆ ಅಬ್ದುಲ್ ಕಲಾಂ ಅವರ ಅವಾರ್ಡ್ ಕೊಡುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ನನ್ನಂಥ ಒಬ್ಬರನ್ನು ಗುರುತಿಸಿ ಇಂತಹ ವೇದಿಕೆಯ ಮೇಲೆ ಸನ್ಮಾನ ಮಾಡುತ್ತಿರುವುದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದ. ನಮ್ಮ ಕನ್ನಡಿಗರ ಪ್ರಾಡಕ್ಟ್ ಅನ್ನು ವಿಶ್ವಮಟ್ಟಕ್ಕೆ ತಲುಪಿಸಿರುವುದಕ್ಕೆ ನನಗೆ ಹೆಮ್ಮೆ ಇದೆ. ಎಪಿಜೆ ಅಬ್ದುಲ್ ಕಲಾಂ ಅವರ ದೊಡ್ಡ ಆಸೆ ಎಂದರೆ ವಿದ್ಯಾಭ್ಯಾಸ, ನಮ್ಮ ಗ್ರಾಮದಲ್ಲಿ 4 ಬಿಲ್ಡಿಂಗ್ ಸರ್ಕಾರಿ ಶಾಲೆಯನ್ನು ಸ್ವಂತ ಹಣದಲ್ಲಿ ಕಟ್ಟಿಸಿದ್ದು, ಈಗ ಅದು ಉದ್ಘಾಟನಾ ಹಂತಕ್ಕೆ ತಲುಪಿದೆ. ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶಿಥಿಲ ವ್ಯವಸ್ಥೆಯಲ್ಲಿರುವ ಶಾಲೆಗಳಿಗೆ ಚಾವಣಿ ಹಾಕಿಸಿ ಅದನ್ನು ರಿಪೇರಿ ಮಾಡಿಸುತ್ತಿದ್ದೇನೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಲಹರಿ ವೇಲು ರವರು ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ದಿಲೀಪ್ ಕುಮಾರ್ ಅವರ ಬಗ್ಗೆ ಮಾತನಾಡಿ, ಎಲ್ಲರೂ ಒಂದು ಪ್ರಾಡಕ್ಟ್ ಅನ್ನು ಪಬ್ಲಿಸಿಟಿ ಮಾಡಲು ಸೆಲೆಬ್ರಿಟಿಗಳನ್ನು ಕರೆಸುತ್ತಾರೆ ಆದರೆ ಇವರ ಪ್ರಾಡಕ್ಟ್ ಗೆ ಇವರೇ ಪಬ್ಲಿಸಿಟಿ ಮಾಡುತ್ತಿದ್ದಾರೆ. ಇವರ ಪ್ರಾಡಕ್ಟ್ ಗೆ ಇವರೇ ಸೆಲೆಬ್ರಿಟಿಯಾಗಿದ್ದಾರೆ. ಇವರು ಮಾತನಾಡುವುದನ್ನು ಗಮನಿಸಿದರೆ ಇವರ ವ್ಯಕ್ತಿತ್ವ, ಹಾಗೂ ಎಷ್ಟು ಸರಳ ವ್ಯಕ್ತಿ ಎಂಬುದು ತಿಳಿಯುತ್ತದೆ. ಅವರು ಮಾಡುತ್ತಿರುವ ಕೆಲಸ ಅದ್ಭುತವಾಗಿದೆ, ಹೀಗೆ ಮುಂದುವರಿಸಿಕೊಂಡು ಹೋಗಲಿ ಎಂದು ಹೇಳಿದರು.

- Advertisement -

Latest Posts

Don't Miss