ರಾಯಚೂರು : ರಾಯಚೂರು ನಗರ(Raichur City)ದ ವೀರಾಂಜನೇಯ ಕಲ್ಯಾಣ ಮಂಟಪ(Veeranjaneya Welfare Hall)ದಲ್ಲಿ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಿದ್ದು ಜೀನಿ ಸ್ಟಾಲ್(Jeanie Stahl) ಅನ್ನು ಏರ್ಪಡಿಸಿದ್ದರು. ಇಂದು ರಾಯಚೂರು ನಗರದಲ್ಲಿ ದಿವಂಗತ ದೊಡ್ಡ ಮಲ್ಲೇಶಪ್ಪ ಅವರ ಸ್ಮರಣಾರ್ಥವಾಗಿ ಉಚಿತ ಮೇಘ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಶ್ರೀ ಶ್ರೀ 108 ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಜ್ಯೋತಿ ಬೆಳಗಿಸುವ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ವಸಂತ್ ಕುಮಾರ್ (Vasant Kumar) ಜೀನಿ ಮಿಲೆಟ್ ಮಿಕ್ಸ್ ಅನ್ನು ನಾನು ನೋಡಿದೆ. ಇದು ಸಿರಿಧಾನ್ಯಗಳಿಂದ ಮಾಡಲ್ಪಟ್ಟಿರುವುದು ಆಗಿದೆ. ಆರೋಗ್ಯಕ್ಕೆ ತುಂಬಾ ಅವಶ್ಯಕ, ನಾನು ತೆಗೆದುಕೊಂಡಿದ್ದೇನೆ ಇದನ್ನು ನಾನು ಸಹ ಉಪಯೋಗಿಸುತ್ತೇನೆ ಎಂದು ಹೇಳಿದರು. ಈ ವೇಳೆ ಅಲ್ಲಿ ಬಂದಿತ್ತು ಅಂತಹ ಅನೇಕ ಜನರು ಸಹ ನಾವು ಜೀನಿಯನ್ ಉಪಯೋಗಿಸುತ್ತಿದ್ದೇವೆ. ಇದರಿಂದ ಬಿಪಿ ಶುಗರ್ ಕಂಟ್ರೋಲ್ ಗೆ ಬರುತ್ತದೆ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಸದರಾದ ಶ್ರೀ ರಾಜ ಅಮರೇಶ್ವರ ನಾಯಕ್(Sri Raja Amareshwar Nayak), ರಾಯಚೂರು ನಗರ ಶಾಸಕರಾದ ಶ್ರೀ ಡಾಕ್ಟರ್ ಶಿವರಾಜ್ ಪಾಟೀಲ್, ಹಾಗೂ ಮುಖಂಡರು, ಜಿಲ್ಲೆಯ ವೈದ್ಯಕೀಯ ಅಧಿಕಾರಿಗಳು ಮತ್ತು ದಿವಂಗತ ಶ್ರೀ ದೊಡ್ಡ ಮಲ್ಲೇಶಪ್ಪ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

