Jarkhand News: ಮೊದಲೆಲ್ಲ ಮನುಷ್ಯನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇದ್ದಲ್ಲಿ, ಅಲೆದು ಅಲೆದು ಚಪ್ಪಲಿ ಸವೆದು, ಕೆಲಸ ಸಿಗದ ಸಮಯದಲ್ಲಿ, ಜನ ಅವನನ್ನು ನೋಡಿ, ನಾಯಿ ಪಾಾಡಾಾಗಿದೆ ಅವನದ್ದು ಎಂದು ಹೇಳುತ್ತಿದ್ದರು. ಆದರೆ ಈ ನಾಯಿ ಮನುಷ್ಯನ ಜೀವನವನ್ನೂ ಮೀರಿ ಬದುಕುತ್ತಿದೆ. ಅದಕ್ಕಾಗಿ ಕೆಲವರು, ಹುಟ್ಟಿದರೆ, ಶ್ರೀಮಂತರ ಮನೆ ನಾಯಿಯಾಗಿ ಹುಟ್ಟಬೇಕು ಅಂತಾ ಹೇಳ್ತಾರೆ.
ಇದೀಗ ಜಾರ್ಖಂಡ್‌ನಲ್ಲಿ ಓರ್ವ ಮಹಿಳೆ ತಾನು ಸಾಕಿದ ನಾಯಿಯ ಹುಟ್ಟುಹಬ್ಬಕ್ಕೆ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ನಾವು ನೀವೆಲ್ಲ ನಮ್ಮ ಬರ್ತ್‌ಡೇನಾ, ಮಕ್ಕಳ ಬರ್ತ್‌ಡೇನಾ ಸಾವಿರಾರು ರೂಪಾಯಿ ಖರ್ಚು ಮಾಡಿ, ಸೆಲೆಬ್ರೇಟ್ ಮಾಡಿರ್ತೀವಿ. ಆದ್ರೆ ಈಕೆ ತನ್ನ ಸಾಕು ನಾಯಿಯ ಬರ್ತ್‌ಡೇಯನ್ನೇ 5 ಲಕ್ಷ ಖರ್ಚು ಮಾಡಿ ಮಾಡಿದ್ದಾಳೆ.
ಇದರಲ್ಲಿ ಇನ್ನೂ ವಿಶೇಷ ಅಂದ್ರೆ, ನಾಯಿ ಬರ್ತ್‌ಡೇಗೆ 40 ಸಾವಿರ ರೂಪಾಯಿಯ ಕೇಕ್ ಕಟ್ ಮಾಡಿಸಿದ್ದಾರೆ. 300 ಜನರಿಗೆ ಕರೆದು, ಸಿಹಿಯೂಟ ಹಾಕಿಸಿದ್ದಾಳೆ. ಶ್ವಾನಕ್ಕೆ ಹೂವಿನ ಹೂವಳೆ ಸುರಿಸಿ, ಸ್ವಾಗತ ಮಾಡಲಾಯಿತು. ಬಳಿಕ ಕೇಕ್ ಕತ್ತರಿಸಿ, ಬಂದ ಅತಿಥಿಗಳೆಲ್ಲ ಶ್ವಾನದೊಂದಿಗೆ ಫೋಟೋ ತೆಗೆದಿಸಿಕೊಂಡರು.