International News: ಸಿಂಪ್ಸನ್ಸ್ ಕಾರ್ಟೂನ್ ಅಂದ್ರೆ ಭವಿಷ್ಯವನ್ನು ಸೂಚಿಸುವ ಕಾರ್ಟೂನ್. ಈ ಕಾರ್ಟೂನ್ ಅದ್ಯಾವ ರೀತಿ ಭವಿಷ್ಯ ಹೇಳುತ್ತದೆ ಎಂದರೆ, 90ರ ದಶಕದಲ್ಲಿ ಬಂದ ಎಪಿಸೋಡ್‌ಗಳೆಲ್ಲ ಇತ್ತೀಚಿನ ದಿನಗಳಲ್ಲಿ ಸತ್ಯವಾಗುತ್ತಿದೆ.
ಈ ಕಾರ್ಟೂನ್ ಶೋನಲ್ಲಿ ಕೊರೋನಾ ರೋಗದ ಬಗ್ಗೆ ಮಾಹಿತಿ ನೀಡಲಾಗಿತ್ತು. ಒಂದು ರೋಗ ಬಂದು, ಆತಂಕಕಾರಿ ವಾತಾವರಣ ಸೃಷ್ಟಿಸಲಿದೆ ಎಂದು ಆ ಕಾರ್ಟೂನ್‌ನಲ್ಲಿ ತೋರಿಸಲಾಗಿತ್ತು. ಅದೇ ರೀತಿ 2020ರಲ್ಲಿ ಕೊರೋನಾ ಬಂದು, ಜನರ ಜೀವನವನ್ನೇ ಹಾಳುಗೆಡವಿತ್ತು. ಟ್ರಂಪ್ ಮುಂದೊಂದು ದಿನ ಅಮೆರಿಕ ಅಧ್ಯಕ್ಷರಾಗುತ್ತಾರೆಂದು ಹೇಳಿತ್ತು. ಅದೇ ರೀತಿ ಟ್ರಂಪ್ ಎರಡರೆಡು ಬಾರಿ ಅಮೆರಿಕ ಅಧ್ಯಕ್ಷರಾಗಿದ್ದಾರೆ.
ಇದರೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ಅಗ್ನಿ ಅವಘಡ ಸಂಭವಿಸುತ್ತದೆ ಎಂದು ಕೂಡ ಈ ಮೊದಲೇ, ಈ ಕಾರ್ಟೂನ್‌ನಲ್ಲಿ ಹೇಳಲಾಗಿತ್ತು. ಅದೇ ರೀತಿ ಅಗ್ನಿ ಅವಘಡ ಸಂಭವಿಸಿ, ದೊಡ್ಡ ದೊಡ್ಡವರನ್ನೇ ದಂಗಾಗಿಸಿದೆ. ಅಲ್ಲದೇ, ಕ್ರಿಪ್ಟೋಕರೆನ್ಸಿ ಸೇರಿ ಹಲವು ವಿಷಯಗಳ ಬಗ್ಗೆ ಸಿಂಪ್ಸನ್ಸ್ ಕಾರ್ಟೂನ್ ಹೇಳಿದೆ. ಇದೀಗ ಜನವರಿ 16 2025ರಂದು ಇಂಟರ್‌ನೆಟ್ ಇರುವುದಿಲ್ಲವೆಂದು ಭವಿಷ್ಯ ನುಡಿಯಲಾಗಿದೆ. ಹಾಗಾದ್ರೆ ಈ ಭವಿಷ್ಯ ನಿಜವಾಗತ್ತಾ ಅಂತಾ ಕಾದು ನೋಡಬೇಕಿದೆ.