ಹೊಟ್ಟೆಯ ಬೊಜ್ಜನ್ನು ಕರಗಿಸುವ ಜ್ಯೂಸ್ ರೆಸಿಪಿ..

ಇಂದಿನ ಹಲವು ಜನರಲ್ಲಿ ಕಾಣುವ ಸಮಸ್ಯೆ ಅಂದ್ರೆ ಬೊಜ್ಜಿನ ಸಮಸ್ಯೆ. ಅದರಲ್ಲೂ ಹೊಟ್ಟೆ ಕರಗಿಸಲು ಹಲವರು ಪಾಡು ಪಡ್ತಾರೆ. ಅಂಥವರಿಗಾಗಿಯೇ ಇಂದು ನಾವು ಬೆಲ್ಲಿ ಫ್ಯಾಟ್‌ ಬರ್ನರ್ ಡ್ರಿಂಕ್ ತಂದಿದ್ದೇವೆ. ಈ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂದು ಸೌತೇಕಾಯಿ, ಚಿಕ್ಕ ತುಂಡು ಹಸಿ ಶುಂಠಿ, ಒಂದು ನಿಂಬೆಹಣ್ಣು, ಒಂದು ಬೌಲ್ ಅನಾನಸ್, ಜೊತೆಗೆ ಅದರ ಸಿಪ್ಪೆ ಕೂಡ ಬಳಸಬೇಕು. ಮೊದಲನೇಯದಾಗಿ ಅನಾನಸ್ ಸಿಪ್ಪೆಯನ್ನು ಒಂದು ಪಾತ್ರೆಗೆ ಹಾಕಿ, ಒಂದು ಗ್ಲಾಸ್ ನೀರಿನೊಂದಿಗೆ ಕುದಿಸಿ. ಗಾಳಿಸಿ, ಒಂದು ಪಾತ್ರೆಗೆ ಹಾಕಿಡಿ. ನಂತರ ಜ್ಯೂಸ್ ಜಾರ್‌ಗೆ ಸೌತೇಕಾಯಿ, ಹಸಿ ಶುಂಠಿ, ಅನಾನಸ್‌, ಕುದಿಸಿಟ್ಟುಕೊಂಡ ಅನಾನಸ್ ನೀರು ಹಾಕಿ ಜ್ಯೂಸ್ ರೆಡಿ ಮಾಡಿ. ಈಗ ಗ್ಲಾಸ್‌ಗೆ ಜ್ಯೂಸ್ ಸರ್ವ್ ಮಾಡಿ, ಅದಕ್ಕೆ ನಿಂಬೆ ರಸ ಸೇರಿಸಿ ಕುಡಿಯಿರಿ. ಇದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ.

ಎರಡನೇಯದು ಆ್ಯಪಲ್ ಜ್ಯೂಸ್. ಎರಡು ಸೇಬು ಹಣ್ಣು, ಒಂದು ಕಪ್ ಗ್ರೀನ್ ಟೀ, ಚಿಕ್ಕ ತುಂಡು ಹಸಿ ಶುಂಠಿ, ಮೂರು ಸ್ಪೂನ್ ನಿಂಬೆರಸ, ಒಂದು ಸ್ಪೂನ್ ಆ್ಯಪಲ್ ಸೀಡರ್ ವಿನೇಗರ್. ಇವಿಷ್ಟು ಈ ಜ್ಯೂಸ್ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿ. ಜ್ಯೂಸರ್ ಜಾರ್‌ಗೆ, ಸೇಬು ಹಣ್ಣು, ಗ್ರೀನ್ ಟೀ, ಶುಂಠಿ, ವಿನೇಗರ್ ಸೇರಿಸಿ ಜ್ಯೂಸ್ ತಯಾರಿಸಿ, ಗ್ಲಾಸ್‌ಗೆ ಸರ್ವ್ ಮಾಡಿ. ಈಗ ಇದಕ್ಕೆ ನಿಂಬೆ ರಸ ಸೇರಿಸಿ, ಸೇವಿಸಿ. ಇನ್ನು ಇಲ್ಲಿ ಹೇಳಿರುವ ವಸ್ತುಗಳಲ್ಲಿ ಯಾವುದಾದರೂ ವಸ್ತುವನ್ನ ಬಳಸಿದ್ದಲ್ಲಿ ನಿಮಗೆ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.

About The Author