Wednesday, December 11, 2024

Latest Posts

ಜೂನ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತೆ ನೋಡಿ..!

- Advertisement -

ಜೂನ್ ತಿಂಗಳಲ್ಲಿ ಜನಿಸಿದವರು ಸುಂದರ ವ್ಯಕ್ತಿತ್ವ ಉಳ್ಳವರಾಗಿರ್ತಾರೆ.

ಇವರು ತಮ್ಮವರ ಸಂತೋಷ ಮತ್ತು ದುಃಖಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮಗೆ ಬೇಕಾದವರು ದುಃಖದಲ್ಲಿದ್ದರೆ ಅಂಥವರ ದುಃಖದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮವರು ಸುಖವಾಗಿದ್ದರೆ ಇವರು ಸಂತೋಷ ಪಡುತ್ತಾರೆ.

ಇವರ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ನಿರ್ಧಾರ ತಮ್ಮದೇ ಆಗಿರಬೇಕೆಂದು ಬಯಸುತ್ತಾರೆ.

ಇವರು ಪೂಜೆ ಪುನಸ್ಕಾರ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ನಂಬಿಕೆ ಹೊಂದಿರುತ್ತಾರೆ.

ಸ್ವಭಾವದಲ್ಲಿ ಧೈರ್ಯವಾನ್ ಎನ್ನಿಸಿಕೊಂಡ ಇವರು, ತಮ್ಮವರ ಸಹಾಯಕ್ಕೆ ಎಂದಿಗೂ ಸಿದ್ಧರಾಗಿರ್ತಾರೆ.

ಎಲ್ಲರಿಗೂ ಒಳ್ಳೆಯ ಸಲಹೆ ನೀಡುವುದರಲ್ಲಿ ಇವರು ಎತ್ತಿದ ಕೈಯಾಗಿರ್ತಾರೆ.

ಜೂನ್ ತಿಂಗಳಲ್ಲಿ ಜನಿಸಿದವರು ಹಠಮಾರಿಗಳಾಗಿರುತ್ತಾರೆ. ಈ ಹಠದಿಂದಲೇ ಕೆಲವೊಮ್ಮೆ ಪಶ್ಚಾತಾಪ ಪಡುವ ಸಂದರ್ಭವೂ ಬರುತ್ತದೆ.

ಇನ್ನು ಜಗಳ ಮಾಡುವುದರಲ್ಲಿ ಈ ತಿಂಗಳಲ್ಲಿ ಹುಟ್ಟಿದವರು ಯಾವಾಗಲೂ ಮುಂದಿರುತ್ತಾರೆ. ಏಕೆಂದರೆ ಸಿಟ್ಟು ಹಿಡಿತದಲ್ಲಿಟ್ಟುಕೊಳ್ಳುವುದರಲ್ಲಿ ಇವರು ಸ್ವಲ್ಪ ವೀಕ್ ಆಗಿರ್ತಾರೆ.

ಕೆಲ ವಿಷಯಗಳನ್ನು ಮಾತನಾಡದೇ, ಮನಸ್ಸಿನಲ್ಲೇ ಇಟ್ಟುಕೊಳ್ಳುವ ಕಾರಣ ಇವರನ್ನು ಕೆಲವರು ಅಹಂಕಾರಿಗಳೆಂದು ಭಾವಿಸುತ್ತಾರೆ.

ಇವರ ಗುಣ ಒಳ್ಳೆಯದಿದ್ದರೂ, ಕೆಲ ಸಲ ಇವರ ಕಠೋರ ನುಡಿಯಿಂದ ಬೇರೆಯವರು ಇವರನ್ನು ತಪ್ಪು ತಿಳಿಯುವ ಸಂದರ್ಭ ಬರುತ್ತದೆ.

ಮನಸ್ಸಿನಲ್ಲಿ ಕಲ್ಮಶವಿಲ್ಲದಿದ್ದರೂ ಇದ್ದದ್ದು ಇದ್ದ ಹಾಗೇ ಹೇಳಿ ಬಿಡುವ ಇವರ ಗುಣ ಕೆಲವೊಮ್ಮ ಇವರ ಮತ್ತು ಎದುರಿನವರ ಮನಸ್ಸಿಗೆ ನೋವುಂಟು ಮಾಡುತ್ತದೆ.

ಇವರು ಯಾರನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ನಂಬಿದ್ರೆ ಕೊನೆ ತನಕ ಅಂಥವರಿಗೆ ಸಾಥ್ ನೀಡುತ್ತಾರೆ.

ಇನ್ನು ಜೂನ್ ತಿಂಗಳಲ್ಲಿ ಜನಿಸಿದವರ ಲಕ್ಕಿ ಕಲರ್ ಕಿತ್ತಳೆ ಮತ್ತು ಹಳದಿ ಬಣ್ಣ, ಲಕ್ಕಿ ನಂಬರ್ 4,6,9, ಅದೃಷ್ಟದ ದಿನಗಳು ಮಂಗಳವಾರ, ಶುಕ್ರವಾರ ಮತ್ತು ಶನಿವಾರವಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss