ಸಿಎಂ ಸಿದ್ದರಾಮಯ್ಯ ಕಣ್ಣು ಮುಚ್ಚಿಕೊಂಡು ನಂಬುವ, ಪರಮಾಪ್ತ ಸಚಿವರು ಕೆ.ಎನ್ ರಾಜಣ್ಣ. ಇತ್ತೀಚೆಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸೆಪ್ಟೆಂಬರ್‌ನಲ್ಲಿ ಬದಲಾವಣೆಯ ಕ್ರಾಂತಿ ಆಗಲಿದೆ ಅಂತಾ ಹೇಳಿದ್ರು. ಈ ಸ್ಫೋಟಕ ಹೇಳಿಕೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆಯ ಬಿರುಗಾಳಿ ಅನ್ನೋದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ವಿಪಕ್ಷ ನಾಯಕ ಆರ್. ಅಶೋಕ್ ಅವರು ಆ ಬದಲಾವಣೆಗೆ ಮುಹೂರ್ತವನ್ನೇ ಇಟ್ಟಿದ್ದಾರೆ. ರಾಜ್ಯ ರಾಜಕೀಯದ ಬದಲಾವಣೆ ಅಂದ್ರೆ ನವರಾತ್ರಿಯ ಶುಭ ಮುಹೂರ್ತ ಫಿಕ್ಸ್ ಮಾಡಿದ್ದಾರೆ.
ಮೈಸೂರಿನಲ್ಲಿ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಆರ್. ಅಶೋಕ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಬದಲಾವಣೆ ಬಗ್ಗೆ ನಾನು ವಿಧಾನಸಭೆಯಲ್ಲೇ ಹೇಳಿದ್ದೆ. ಸೆಪ್ಟೆಂಬರ್ ನಲ್ಲಿ ಬದಲಾವಣೆ ಖಚಿತ, ನಿಶ್ಚಿತ. ಒಪ್ಪಂದದ ಪ್ರಕಾರ ಸಿಎಂ ಕುರ್ಚಿ ಬಿಟ್ಟು ಕೊಡಲೇ ಬೇಕಾಗುತ್ತದೆ. ಈಗ ಕುರ್ಚಿಗಳ ಕಿತ್ತಾಟ ಆಗುತ್ತಿದೆ. ಇದು ಪ್ರಾರಂಭವಷ್ಟೇ. ಟ್ರೇಲರ್ ಈಗಷ್ಟೇ ಹೊರ ಬರ್ತಿದೆ ಎಂದು ಅಶೋಕ್ ಹೇಳಿದ್ದಾರೆ.
ಓರ್ವ ಸಚಿವರು ಭಾರೀ ಬದಲಾವಣೆ ಅಂದ್ರೆ, ಇನ್ನೂ ಕೆಲವರು ಸ್ಪಲ್ಪ ಕ್ರಾಂತಿ ಅಂತಾ ಹೇಳ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳೋಕೆ ಏನೂ ಇಲ್ಲ ಅಂತಾ ಹೇಳ್ತಾರೆ. ಇದನ್ನ ಬಿಟ್ಟು ಇನ್ನೇನು ಹೇಳ್ತಾರೆ. ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡಲ್ಲ. ಹೊಸ ಸಿಎಂ ದಸರಾ ಉದ್ಘಾಟನೆ ಮಾಡುತ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ.
ಇಷ್ಟು ದಿನ ಸೆಪ್ಟೆಂಬರ್ ಕ್ರಾಂತಿ ಎಂದಷ್ಟೇ ಹೇಳಲಾಗ್ತಿತ್ತು. ಆದ್ರೀಗ ಆರ್. ಅಶೋಕ್ ದಸರಾ ಮುಹೂರ್ತ ಫಿಕ್ಸ್ ಮಾಡಿದ್ದು, ರಾಜ್ಯ ರಾಜಕೀಯದಲ್ಲೇ ಭಾರೀ ಕುತೂಹಲ ಕೆರಳಿಸಿದೆ. ನಿಮ್ಮ ಪ್ರಕಾರ ದಸರಾಗೆ ಸಿಎಂ ಬದಲಾವಣೆ ಆಗುತ್ತಾ. ಕಮೆಂಟ್ ಮಾಡಿ ತಿಳಿಸಿ.