Thursday, July 31, 2025

Latest Posts

K S Eshwarappaರನ್ನು ಸಂಪುಟದಿಂದ ತಕ್ಷಣ ವಜಾ ಮಾಡಬೇಕು..!

- Advertisement -

ಇಂದು ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು (Congress party leaders) ಹಾಗೂ ಶಾಸಕರು ಕೆಎಸ್ ಈಶ್ವರಪ್ಪ (K S Eshwarappa) ಹೇಳಿಕೆ ವಿರುದ್ಧ ಮುಗಿಬಿದ್ದಿದ್ದು  ಈ ಕೂಡಲೇ ಸಂಪುಟದಿಂದ ತಕ್ಷಣ ವಜಾ ಮಾಡಬೇಕು,  ಹಾಗೂ ಈಶ್ವರಪ್ಪ ಲೂಟಿಕೋರ, ದೇಶದ್ರೋಹಿ ಪ್ರಕರಣ (case of the traitor) ದಾಖಲಿಸುವಂತೆ  ಒತ್ತಾಯ ಮಾಡುತ್ತಿದ್ದಾರೆ. ಕೆಂಪು ಕೋಟೆಯ ಮೇಲೆ ಕೇಸರಿ ದ್ವಜಹಾರಿಸುತ್ತೇವೆ ಎಂಬ ಹೇಳಿಕೆಗೆ ವಿಧಾನಸಭೆ ಕಲಾಪ (Session) ಆರಂಭದಿಂದಲೇ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ರು. ಸಚಿವ ಈಶ್ವರಪ್ಪ ಈ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದರು. ಆರೋಪ-ಪ್ರತ್ಯಾರೋಪ ಜೋರಾಗುತ್ತಿದ್ದಂತೆ ಕಲಾಪದಲ್ಲಿ ಗದ್ದಲ ಉಂಟಾಯಿತು. ಡಿ.ಕೆ ಶಿವಕುಮಾರ್ (DK Sivakumar) ಹಾಗೂ ಸಚಿವ ಈಶ್ವರಪ್ಪ ಪರಸ್ಪರ ಏಕವಚನದಲ್ಲೇ ಜಟಾಪಟಿ ನಡೆಸಿದ್ರು. ರಾಷ್ಟ್ರಧ್ವಜದ ಬಗ್ಗೆ ಲಘು ಹೇಳಿಕೆ ನೀಡಿರುವ ನೀನು ದೇಶದ್ರೋಹಿ ಅಂತ ಡಿಕೆಶಿ ಜರಿದರು. ಇದಕ್ಕೆ ಆಕ್ರೋಶಗೊಂಡ ಈಶ್ವರಪ್ಪ, ನಾನಲ್ಲ ರಾಷ್ಟ್ರದ್ರೋಹಿ  ನೀನು ಅಂತ ಪ್ರತ್ಯಾರೋಪ ಮಾಡಿದ್ರು. ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಬಳಿಕ ಸಿಟ್ಟಾದ ಡಿಕೆಶಿ, ಆವೇಶದಲ್ಲಿ ಈಶ್ವರಪ್ಪ ಎದುರೇ ನಡೆದು ಬಿಟ್ರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಮಾರ್ಷಲ್‌ಗಳು (Marshals) ಸ್ಥಳಕ್ಕೆ ಎಂಟ್ರಿ ಕೊಟ್ಟರು. ತೀವ್ರ ಗದ್ದಲವಾಗ್ತಿದ್ದಂತೆ ಸ್ಪೀಕರ್ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

- Advertisement -

Latest Posts

Don't Miss