Recipe: ಪನೀರ್‌ನಿಂದ ಹಲವಾರು ರೆಸಿಪಿಯನ್ನ ನಾವು ತಯಾರಿಸಬಹುದು. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಸುಲಭವಾಗಿ ಕಡಾಯಿ ಪನೀರ್ ತಯಾರಿಸಬಹುದು ಅಂತಾ ತಿಳಿಯೋಣ ಬನ್ನಿ..
ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಜೀರಿಗೆ, ಅರ್ಧ ಸ್ಪೂನ್ ಪೆಪ್ಪರ್, 3 ಒಣಮೆಣಸು, ಇಷ್ಟನ್ನು ಪ್ಯಾನ್‌ಗೆ ಹಾಕಿ ಚೆನ್ನಾಗಿ ಹುರಿದು, ಪುಡಿ ಮಾಡಿ. ಈಗ ಅದೇ ಪ್ಯಾನ್‌ಗೆ ಎರಡು ಸ್ಪೂನ್ ಎಣ್ಣೆ 5 ಎಸಳು ಬೆಳ್ಳುಳ್ಳಿ, 2 ಶುಂಠಿ ತುಂಡು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ, ಹುರಿಯಿರಿ. ಇದಕ್ಕೆ ಟೊಮೆಟೋ ಸೇರಿಸಿಕೊಂಡು ಮತ್ತೆ ಹುರಿಯಿರಿ.
ಈ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ತಯಾರಿಸಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಬೆಣ್ಣೆ, ಪಲಾವ್ ಎಲೆ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ, ಗರಂ ಮಸಾಲೆ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಈಗ ಇದಕ್ಕೆ ಈಗಾಗಲೇ ರೆಡಿ ಮಾಡಿಟ್ಟುಕೊಂಡ ಈರುಳ್ಳಿ, ಟೊಮೆಟೋ ಪೇಸ್ಟ್ ಸೇರಿಸಿ. ಬಳಿಕ ಇದಕ್ಕೂ ಮುನ್ನ ತಯಾರಿಸಿದ್ದ ಮಸಾಲೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅವಶ್ಯಕತೆ ಇದ್ದಷ್ಟು ನೀರು, ಪನೀರ್ ಕ್ಯೂಬ್ಸ್, ಕ್ರೀಮ್, ಕೊತ್ತೊಂಬರಿ ಸೊಪ್ಪು ಸೇರಿಸಿ, 5ನಿಮಿಷ ಕುದಿಸಿದರೆ, ಕಡಾಯಿ ಪನೀರ್ ರೆಡಿ.