Sunday, April 20, 2025

Latest Posts

ಹೋಮ್ ನರ್ಸ್ ಕೆಲಸಕ್ಕೆ ಬಂದು 6 ಲಕ್ಷದ ಚಿನ್ನ ಕದ್ದ ಕಳ್ಳಿ ಅರೆಸ್ಟ್..

- Advertisement -

Hubballi News: ಹುಬ್ಬಳ್ಳಿ: ಹೋಮ್ ನರ್ಸ್ ಕೆಲಸಕ್ಕೆ ಬಂದು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಬಳೆಗಳನ್ನು ಕದ್ದು ಪರಾರಿಯಾಗಿದ್ದ ಚಾಲಕಿ ಕಳ್ಳಿಯನ್ನು ಬಂಧನ ಮಾಡುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾಹ್ನವಿ ಎಂಬ ಮಹಿಳೆಯು ನಗರದ ವಿದ್ಯಾನಗರ ಲಿಂಗರಾಜನಗರದ ಶಿವಾನಂದ ಕೊಟ್ಟರಶೆಟ್ಟರ್ ಇವರ ಮನೆಯಲ್ಲಿ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಲು ಹೋಮ್ ನರ್ಸ್ ಕೆಲಸಕ್ಕೆ ಬಂದು ಮನೆಯಲ್ಲಿದ್ದ 6 ಲಕ್ಷ ರೂ. ಮೌಲ್ಯದ ಬಂಗಾರದ ಬಳೆಗಳನ್ನು ಕದ್ದು ಕೈಚಳಕ ತೋರಿಸಿ ಮಳ್ಳಿಯಂತೆ‌ ಕಳ್ಳಿ ಪರಾರಿಯಾಗಿದ್ದಳು. ಈ ಕುರಿತಂತೆ ದೂರು ದಾಖಲಾಗಿತ್ತು.

ಪ್ರಕರಣ ಜಾಡು ಬೆನ್ನತ್ತಿದ್ದ ವಿದ್ಯಾನಗರ ಠಾಣೆಯ ಪೊಲೀಸರು ನಿನ್ನೆ ಖಚಿತ ಮಾಹಿತಿ ಮೇರೆಗೆ ಧಾರವಾಡದ ಗಾಂಧಿ ಚೌಕ ಹತ್ತಿರ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಿಸಿದಾಗ 3,50,000 ರೂ. ಮೌಲ್ಯದ 4 ಬಂಗಾರದ ಬಳೆಗಳ ಸಮೇತ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಲಾಗಿದೆ.

ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಡಿಸಿಪಿಗಳಾದ ಎಂ.ರಾಜೀವ್, ರವೀಶ್ ಸಿ.ಆರ್, ಎಸಿಪಿ ನಂದಗಾವಿ ಇವರುಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಂತಿ ಗೌಳಿ ಇವರ ನೇತೃತ್ವದಲ್ಲಿ ಪಿಎಸ್ಐಗಳಾದ ಶ್ರೀಮಂತ ಹುಣಸಿಕಟ್ಟಿ, ಬಿ.ಎನ್.ಕಲ್ಯಾಣಿ, ಸಿಬ್ಬಂದಿಗಳಾದ ಶಿವಾನಂದ ತಿರಕಣ್ಣವರ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಪರಶುರಾಮ ಹಿರಗಣ್ಣವರ, ಸಯ್ಯದ್ ಅಲಿ ತಹಶಿಲ್ದಾರ, ರಮೇಶ್ ಹಲ್ಲೆ, ಮಂಜುನಾಥ ಏಣಗಿ, ಶರಣಗೌಡ ಮೂಲಿಮನಿ ಇವರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಬೇಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡ ಟೀಂ ಇಂಡಿಯಾ ಆಟಗಾರರು..

ರಾಮಮಂದಿರ ಉದ್ಘಾಟನೆಗೆ ಹೋಗಲಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಜಗ್ಗಿ ವಾಸುದೇವ್

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

- Advertisement -

Latest Posts

Don't Miss