- Advertisement -
Dharwad News: ಕಲಘಟಗಿ: ಐವತ್ತು ಸಾವಿರ ಹಣವನ್ನ ಮರಳಿ ಕೇಳಲು ಬಂದ ಇಬ್ಬರು ಯುವಕರನ್ನ ಹೊಡೆಯಲು ಮುಂದಾದ ಹಣ ಪಡೆದ ಯುವಕನನ್ನ ಕೊಲೆ ಮಾಡಿರುವ ಪ್ರಕರಣ ಟಿ.ಗುಡಿಹಾಳ- ಮುತ್ತಗಿ ರಸ್ತೆಯಲ್ಲಿ ಸಂಭವಿಸಿದೆ.
ಕೊಲೆಯಾದ ಯುವಕನನ್ನ ಉಗ್ನಿಕೇರಿಯ 28 ವರ್ಷದ ಕಾಶಿನಾಥ ಕಂಪ್ಲಿ ಎಂಬ ಯುವಕನೇ ಹತ್ಯೆಯಾಗಿದ್ದು, ಟಿ.ಗುಡಿಹಾಳದ 28 ವರ್ಷದ ಮೊಹ್ಮದಸಮೀರ ಜಮ್ಯಾಳ ಹಾಗೂ ರಮೇಶ ಗಂಗಪ್ಪನವರ ಎಂಬುವವರು ಆರೋಪಿಗಳು ಎಂದು ಹೇಳಲಾಗಿದೆ.
ಕೊಲೆಯಾದ ಕಾಶಿನಾಥ, ಇಬ್ಬರಿಂದ ಐವತ್ತು ಸಾವಿರ ಪಡೆದಿದ್ದ. ಅದನ್ನ ಮರಳಿ ಕೇಳಲು ಬಂದಾಗ ಘಟನೆ ನಡೆದಿದೆ. ಪ್ರಕರಣದ ಸ್ಥಳಕ್ಕೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಅವರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
- Advertisement -

