“ನಿರೀಕ್ಷೆ ಎಂಬಂತೆ ರಾಮ ಹನುಮರ ಬಾಂಧವ್ಯಕ್ಕೆ ಕನ್ನಡದ ನಂಟಿದೆ, ಕರುನಾಡ ಕಂಪಿದೆ”

National News: ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾನ ಮೂರ್ತಿಯನ್ನೇ ಪ್ರಾಣಪ್ರತಿಷ್ಠಾಪನೆಗೆ ಫೈನಲ್ ಮಾಡಿದ್ದು, ಕನ್ನಡಿಗರ ಸಂಕ್ರಾಂತಿ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಈ ವಿಷಯಕ್ಕಾಗಿ ಹಲವು ರಾಜಕೀಯ ಗಣ್ಯರು ಟ್ವೀಟ್ ಮಾಡುವ ಮೂಲಕ, ಅರುಣ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ‘ರಾಮಲಲ್ಲಾ’ ಮೂರ್ತಿ ಆಯ್ಕೆ ಆಗಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶ್ರೀರಾಮತೀರ್ಥ ಪ್ರಕಟಣೆ ಹೊರಡಿಸುವುದು ಕನ್ನಡಿಗರೆಲ್ಲರ ಪಾಲಿನ ಸಂಕ್ರಾಂತಿ ಸಂಭ್ರಮವನ್ನು ಇಮ್ಮಿಡಿಗೊಳಿಸಿದೆ ಹಾಗೂ ರಾಮಲಲ್ಲಾ ಮೂರ್ತಿ ಅರಳಿರುವುದು ಹೆಚ್.ಡಿ.ಕೋಟೆ ತಾಲೂಕಿನ ಶಿಲೆ ಎನ್ನುವ ಸಂಗತಿ ಮಂದಿರದ ಜತೆ ಕನ್ನಡಿಗರ ಶ್ರದ್ಧೆಯನ್ನು ಗಾಢಗೊಳಿಸಿದೆ. * ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಅವರಿಗೆ ಆ ಶ್ರೀರಾಮ ದೇವರ ಅನುಗ್ರಹ ಸದಾ ಇರಲಿ ಹಾಗೂ ಅವರು ಇಂಥ ಇನ್ನೂ ಅನೇಕ ಮಹೋನ್ನತ ಶಿಲ್ಪಗಳನ್ನು ದೇಶಕ್ಕೆ ನೀಡಲಿ, ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

“ನಿರೀಕ್ಷೆ ಎಂಬಂತೆ ರಾಮ ಹನುಮರ ಬಾಂಧವ್ಯಕ್ಕೆ ಕನ್ನಡದ ನಂಟಿದೆ, ಕರುನಾಡ ಕಂಪಿದೆ”. ಇದರ ದ್ಯೋತಕ ಎಂಬಂತೆ ಮೈಸೂರಿನ ಪ್ರತಿಭಾವಂತ ಹಾಗೂ ಕೌಶಲ್ಯ ಶ್ರದ್ಧೆಯ ಯುವ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ರಾಮಪ್ರೇರಣೆಯ ಕಲ್ಪನೆಯಿಂದ ಪಡಿಮೂಡಿದ ರಾಮಲಲಾನ ವಿಗ್ರಹವೇ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಳ್ಳುತ್ತಿರುವುದು ಸಮಗ್ರ ಕರ್ನಾಟಕದ ಹಿರಿಮೆ, ಕನ್ನಡಿಗರ ಹೆಮ್ಮೆಯಾಗಿದೆ. ಅರುಣ್ ಯೋಗಿರಾಜ್ ಮತ್ತವರ ತಂಡಕ್ಕೆ ಅನಂತ ಅಭಿನಂದನೆಗಳು ಎಂದು ಟ್ವೀಟ್ ಮಾಡುವ ಮೂಲಕ ವಿಜಯೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಹನುಮನುದಿಸಿದ ನಾಡಿನ ಶಿಲ್ಪಿಯ ಕೈನಿಂದ ರಾಮಸೇವೆ. ನಮ್ಮ ಮೈಸೂರಿನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಬಾಲರಾಮನ ಮೂರ್ತಿಯು ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಮೂರ್ತಿಯನ್ನು ಕೆತ್ತಲು ಬಳಸಿದ ಕೃಷ್ಣಶಿಲೆಯೂ ನಮ್ಮ ಕರ್ನಾಟಕದ್ದೇ ಎಂಬುದು ನಾಡಿನ ಸಮಸ್ತರೂ ಸಂಭ್ರಮಿಸುವ ವಿಷಯವಾಗಿದೆ ಎಂದು ಪ್ರೀತಂಗೌಡ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಹೆಮ್ಮೆಯ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.ಮೈಸೂರು ಮೂಲದ ಪ್ರಖ್ಯಾತ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಆಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ರಾಮಮಂದಿರದ ವಿಗ್ರಹದ ಕೆತ್ತನೆಯನ್ನು ನೆರವೇರಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

 

https://twitter.com/preethamgowda_j/status/1746884054295908353

https://twitter.com/mepratap/status/1746898653070192777

ಬಿಡದಿ ಫಾರ್ಮ್‌ಹೌಸ್‌ನಲ್ಲಿ ಕುಟುಂಬಸ್ಥರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಸಂಕ್ರಾಂತಿ ಸಂಭ್ರಮ

ಇಂಡಿಯಾ ಘಟಬಂಧನದ ಅಸ್ತಿತ್ವ ಎಲ್ಲಿದೆ..? ತೋರಿಸೋಕಷ್ಟೆ ಇದೆ: ಪ್ರಹ್ಲಾದ್ ಜೋಶಿ ವ್ಯಂಗ್ಯ..

‘ನಾನು ಮೋದಿ ವಿರೋಧಿ ಎಂದು 3 ಪಕ್ಷಗಳು ನನಗೆ ಟಿಕೇಟ್ ಕೊಡಲು ಮುಂದಾಗಿದೆ. ಆದರೆ…’

About The Author