Kannada Fact Check: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಪ್ರಪಂಚದ ಮೂಲೆ ಮೂಲೆಯಿಂದ ಜನ ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ.
ಆದರೆ ಈ ಕುಂಭ ಮೇಳದಲ್ಲಿ ಯಾರ್ಯಾರು ಭಾಗವಹಿಸುತ್ತಿಲ್ಲವೋ, ಅಂಥವರ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೊದಲು ಪ್ರಕಾಶ್ ರಾಜ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ಅದು ಸುಳ್ಳು ಎಂದು ಗೊತ್ತಾಯಿತು. ಇದೀಗ ಪ್ರಿಯಾಂಕಾ ವಾದ್ರಾ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆಂದು ಫೋಟೋ ವೈರಲ್ ಆಗಿದೆ.
ಈ ಫೋಟೋವನ್ನು ಕರ್ನಾಟಕದವರೇ ವೈರಲ್ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಾತನ್ನು ನಿಮ್ಮ ಪಕ್ಷದ ಆಧಾರ ಸ್ಥಂಬಗಳೇ ಕೇಳುತ್ತಿಲ್ಲವಲ್ಲ ಎಂದು ಬರೆದುಕೊಂಡಿದ್ದಾರೆ. ಈ ಬರಹಕ್ಕೆ ಪ್ರಿಯಾಂಕಾ ಗಾಂಧಿಯವರು ಗಂಗೆಯಲ್ಲಿ ಮಿಂದೇಳುವ ಫೋಟೋ ಹಾಕಿದ್ದಾರೆ. ಪ್ರಿಯಾಂಕಾ ವಾದ್ರಾ ಗಂಗೆಯಲ್ಲಿ ಮಿಂದೆದಿದ್ದು ಸತ್ಯವೇ. ಆದರೆ ಕುಂಭ ಮೇಳದಲ್ಲಲ್ಲ ಬದಲಾಗಿ 2021ರ ಮೌನಿ ಅಮಾವಾಸ್ಯೆಯಂದು.
ಈ ದಿನ ಪ್ರಿಯಾಂಕಾ ಗಾಂಧಿ ಗಂಗೆಯಲ್ಲಿ ಮಿಂದೆದಿದ್ದು, ಇದೇ ಫೋಟೋವನ್ನು ಮಹಾಕುಂಭ ಮೇಳದ ಗಂಗಾಸ್ನಾನದಲ್ಲಿ ಮಿಂದೆದಿದ್ದು ಎಂದು ಫೋಟೋ ವೈರಲ್ ಮಾಡಿದ್ದಾರೆ.
Claim: ಪ್ರಿಯಾಂಕಾ ವಾದ್ರಾ ಮಹಾಕುಂಭ ಮೇಳದಲ್ಲಿ ಮಿಂದೆದಿದ್ದಾರೆಂದು ಫೋಟೋ ವೈರಲ್ ಮಾಡಲಾಗಿದೆ.
Fact: ಆದರೆ ಪ್ರಿಯಾಂಕಾ ವಾದ್ರಾ 2021ರಲ್ಲಿ ಮೌನಿ ಅಮಾವಾಸ್ಯೆಯ ದಿನ ಗಂಗಾಸ್ನಾನ ಮಾಡಿದ್ದಾರೆ.
Conclusion: ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ವಾದ್ರಾ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ, ಪುಣ್ಯಸ್ನಾನ ಮಾಡಿದ್ದಾರೆಂದು ಹೇಳಲಾಗಿದೆ. ಆದರೆ ಪ್ರಿಯಾಂಕಾ ವಾದ್ರಾ 2021ರ ಮೌನಿ ಅಮಾವಾಸ್ಯೆಯಂದು ಗಂಗಾಸ್ನಾನ ಮಾಡಿದ್ದಾರೆ.
Fact check by Press Trust Of India (Shakti Publishers)