Kannada Fact Check: ಹೈದರಾಬಾದ್: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಫುಡ್ ಡಿಲೆವರಿ ಮಾಡಲು ಓರ್ವ ಯುವತಿ ಒಂದು ಮನೆಗೆ ಬಂದಿದ್ದು, ಆ ಮನೆಯಲ್ಲಿದ್ದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಕುಡಿದು ಮಜಾ ಮಾಡುತ್ತಿದ್ದ. ಈಕೆ ತಂದು ಕೊಟ್ಟ ಊಟ ತೆಗೆದುಕೊಂಡು, ಈಕೆಗೆ ದುಡ್ಡು ಕೊಡದೇ, ಬಾಗಿಲು ಹಾಕಿದ್ದ. ಆದರೆ ಫುಡ್ ಡಿಲೆವರಿ ಕೊಟ್ಟಿದ್ದ ಯುವತಿ, ಹಣ ನೀಡಿ ಎಂದು ಪದೇ ಪದೇ ಬಾಾಗಿಲು ಬಡಿದಿದ್ದಳು.
ಆದರೂ ಹಣ ನೀಡದ ಆ ಯುವಕರ ಗುಂಪು ಬಾಗಿಲು ತೆಗೆದು, ಆ ಯುವತಿಯನ್ನು ಒಳಗೆಳೆದುಕೊಂಡು, ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ದೇಹ ರಕ್ತಸಿಕ್ತವಾಗುಂತೆ ಹಿಂಸೆ ನೀಡಿ ಹೊರದಬ್ಬಿತ್ತು. ಬಳಿಕ ಹೊರಬಂದು ಆಕೆ ಹೊಟ್ಟೆ ನೋವಿನಿಂದ ಒದ್ದಾಡಿ ಸಾವನ್ನಪ್ಪಿದ್ದಳು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಹಲವರಿಗೆ ಕೋಪ ಬರಿಸಿತ್ತು. ಇನ್ನು ಕೆಲವರು ಪಾಪದ ಹೆಣ್ಣು ಮಕ್ಕಳು ಹೊಟ್ಟೆಪಾಡಿಗಾಗಿ ದುಡಿಯುವ ಹಾಗೂ ಇಲ್ಲ ಈ ಕಾಲದಲ್ಲಿ ಎಂದು ಆತಂಕ ಪಟ್ಟಿದ್ದರು.
ಆದರೆ ಇದೀಗ ಆ ಬಗ್ಗೆ ಫ್ಯಾಕ್ಟ್ ಚೆಕ್ ನಡೆದಿದ್ದು, ಇದು ನಿಜವಾಗಿಯೂ ನಡೆದ ಘಟನೆ ಅಲ್ಲ. ಸಮಾಜದಲ್ಲಿ ಹೀಗೆ ಮನೆ ಮನೆಗೆ ಹೋಗಿ, ಫುಡ್ ಡಿಲೆವರಿ ಸೇರಿ ಬೇರೆ ಬೇರೆ ಕೆಲಸ ಮಾಡುವ ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳಲಿ, ಹುಷಾರಾಗಿರಬೇಕು ಎಂದು ಎಚ್ಚರಿಕೆ ಸಂದೇಶ ನೀಡಲು ಮಾಡಿದ್ದ ಸ್ಕ್ರಿಪ್ಟೆಡ್ ವೀಡಿಯೋ ಆಗಿತ್ತು.
ಆದರೆ ಜನ ಇದನ್ನು ಸತ್ಯ ಘಟನೆ ಎಂದು ತಿಳಿದಿದ್ದರು. ಇಂಥ ದುರುಳರನ್ನು ಸುಮ್ಮನೆ ಬಿಡಬಾರದು. ಇವರೆಲ್ಲ ಯಾರು, ಈ ಘಟನೆ ನಡೆದಿದ್ದಾದರೂ ಎಲ್ಲಿ ಎಂದು ತಿಳಿದು, ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇನ್ಮುಂದೆ ಇಂಥ ಕೆಲಸ ಮಾಡಲು ಯಾರೂ ಧೈರ್ಯ ಮಾಡಬಾರದು ಅಂತೆಲ್ಲ ಹೇಳಿದ್ದಾರೆ. ಇಂಥ ಘಟನೆ ನಡೆಯುವ ಸಾಧ್ಯತೆಯೂ ಇರಬಹುದು. ಹಾಗಾಗಿ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ಸಂದೇಶ ಕೊಡಲು ಮಾಡಿದ ವೀಡಿಯೋ ಇದಾಗಿತ್ತು ಎಂದು ಸತ್ಯ ಗೊತ್ತಾಗಿದೆ.
Claim Review: ಫುಡ್ ಡಿಲೆವರಿ ಮಾಡಲು ಬಂದ ಯುವತಿ ಮೇಲೆ ಅತ್ಯಾಚಾರ
Claimed By: Social Media Users
Claim Reviewed By: News Meter
Claim Fact check: ಸುಳ್ಳು ಸುದ್ದಿ
Fact: 3RD EYE ಎನ್ನುವ ಚಾಾನೆಲ್ ಹೀಗೊಂದು ವೀಡಿಯೋ ರಚಿಸಿ, ಎಚ್ಚರಿಕೆಯ ಸಂದೇಶ ನೀಡಿದೆ.