Wednesday, January 15, 2025

Latest Posts

ಕರ್ನಾಟಕ ಸಿಎಂ ಮುಡಾ ಕೇಸ್ ಭವಿಷ್ಯ ಇಂದು ನಿರ್ಧಾರ: ಧಾರವಾಡದಲ್ಲಿ ವಕೀಲರ ಮುಖಾಮುಖಿ

- Advertisement -

Dharwad News: ಧಾರವಾಡ: ಧಾರವಾಡ ಹೈಕೋರ್ಟ್‌ಗೆ ಸ್ನೇಹಮಯಿ ಕೃಷ್ಣ ಭೇಟಿ ನೀಡಿದ್ದು, ಕೋರ್ಟ್‌ಗೆ ತೆರಳುವ ಮುನ್ನ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿತ್ತು. ಈ ಸಂಬಂಧ ದೂರು ದಾಖಲು ಮಾಡಿದ್ದೇ. ಸಿದ್ದರಾಮಯ್ಯ ಮತ್ತು ಕುಟುಂಬ ಇದರಲ್ಲಿ ಭಾಗಿಯಾಗಿದೆ. ಲೋಕಾಯುಕ್ತದಲ್ಲಿ ಸೂಕ್ತ ತನಿಖೆ ಆಗುವುದಿಲ್ಲ. ಹೀಗಾಗಿ ಸಿಬಿಐಗೆ ಕೇಳಿದ್ದೆ. ಅರ್ಜಿ ವಿಚಾರಣೆ ಸಾಕಷ್ಟು ಆಗಿದೆ. ಇವತ್ತು ಅಂತಿಮ ಆದೇಶ ಆಗುವ ಸಾಧ್ಯತೆ ಇದೆ. ಜಡ್ಜ್ ಇವತ್ತು ಧಾರವಾಡ ಪೀಠಕ್ಕೆ ಬಂದಿದ್ದಾರೆ. ಹೀಗಾಗಿ ಇಲ್ಲಿ ವಿಚಾರಣೆ ಇದೆ. ನಮ್ಮ ಪರ ವಕೀಲರು ಮನಿಂಧರ್ ಸಿಂಗ್ ಬಂದಿದ್ದಾರೆ. ಎಲ್ಲರೂ ಇಲ್ಲಿಯೆ ಬಂದದ್ದೇವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಕರ್ನಾಟಕ ಸಿಎಂ ಮುಡಾ ಕೇಸ್ ಭವಿಷ್ಯ ಇಂದು ನಿರ್ಧಾರ ಹಿನ್ನೆಲೆ, ಕೋರ್ಟ್ ಹಾಲ್ ಇಂದು ಹೆಚ್ಚು ಜನ ಸೇರಿದ್ದಾರೆ.  ಸ್ನೇಹಮಯ ಕೃಷ್ಣ ಮತ್ತು ಸಿದ್ದರಾಮಯ್ಯ ಪರ ವಕೀಲರ ವಾದ-ಪ್ರತಿವಾದ ಹಿನ್ನೆಲೆ ಹಿರಿಯ ವಕೀಲರ ವಾದ-ಪ್ರತಿವಾದ ಆಲಿಸಲು ಇತರೇ ವಕೀಲರು ಕೂಡ ಬಂದಿದ್ದಾರೆ.  ಸ್ನೇಹಮಯಿ ಕೃಷ್ಣ ಪರ ಮಣಿಂದರ್ ಸಿಂಗ್ ವಾದ ಮಾಡಿದರೆ, ಸಿದ್ದು ಪರ ಅಭಿಶೇಕ್ ಮನುಸಿಂಘ್ವಿ ವಿಸಿ ಮೂಲಕ ವಾದ ಮಾಡುತ್ತಿದ್ದಾರೆ.

- Advertisement -

Latest Posts

Don't Miss