ಬೆಂಗಳೂರು: ಇಂದು ಸರ್ಕಾರದ ಅಳಿವು ಉಳಿವಿಗಾಗಿ ನಡೆಯುವ ವಿಶ್ವಾಸಮತಯಾಚನೆಗೆ ದೇಶವೇ ಕಾತುರದಿಂದ ಕಾಯುತ್ತಿದೆ. ಒಂದು ವರ್ಷಗಳ ಕಾಲ ಸರಾಗವಾಗಿ ಆಡಳಿತ ನಡೆಸಿದ್ದ ಮೈತ್ರಿ ಸರ್ಕಾರಕ್ಕೆ ಇಂದು ಪತನಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು, ಬಿಜೆಪಿ ಗೆಲುವು ನಮ್ಮದೇ ಅನ್ನೋ ವಿಶ್ವಾಸದಲ್ಲಿದೆ.
ವಿಧಾನಸಭೆಯಲ್ಲಿ ಇವತ್ತು ಸಿಎಂ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದು, ಕಾಂಗ್ರೆಸ್ -ಜೆಡಿಎಸ್ ನ ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿ ಮೈತ್ರಿ ಪರ ಮತ ಚಲಾಯಿಸುವಂತೆ ತಾಕೀತು ಮಾಡಿದೆ. ಅತ್ತ ಯಾವುದೇ ಕಾರಣಕ್ಕೂ ನಾವು ಇಂದಿನ ವಿಶ್ವಾಸಮತ ಯಾಚನೆಗೆ ಬರೋದಿಲ್ಲ, ನಮ್ಮೆಲ್ಲರ ನಿರ್ಧಾರ ಬದಲಿಸೋಕೆ ಸಾಧ್ಯವಿಲ್ಲ ಅಂತ ಮುಂಬೈನಲ್ಲಿ ಬೀಡುಬಿಟ್ಟಿರೋ ಅತೃಪ್ತ ಶಾಸಕರು ಪಟ್ಟುಹಿಡಿದು ಕುಳಿತಿದ್ದಾರೆ. ಹೀಗಾಗಿ ಮೈತ್ರಿಗೆ ಇಂದು ಹಿನ್ನಡೆಯಾಗೋದು ಬಹುತೇಕ ಖಚಿತ ಅನ್ನೋದು ಮೇಲ್ನೋಟಕ್ಕೆ ಕಾಣುತ್ತಿದೆ.
ಇನ್ನು ಕಾಂಗ್ರೆಸ್-ಜೆಡಿಎಸ್ ನ ಅತೃಪ್ತರನ್ನು ಸೆಳೆಯುವಲ್ಲಿ ಎಲ್ಲಾ ಕಸರತ್ತು ನಡೆಸಿರೋ ಬಿಜೆಪಿ, ಸದ್ಯಕ್ಕೆ ಪಕ್ಷೇತರರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ಅವರಿಬ್ಬರ ಬೆಂಬಲ ಪಡೆಯುವ ವಿಶ್ವಾಸದಲ್ಲಿದೆ. ಇನ್ನು ದೋಸ್ತಿ ಪಕ್ಷದ ಅತೃಪ್ತರು ಪಟ್ಟುಹಿಡಿದು ಕುಳಿತಿರೋದ್ರಿಂದ ಬಿಜೆಪಿ ಗೆಲುವಿನ ಹುಮ್ಮಸ್ಸಿನಲ್ಲಿದ್ದು, ಇಂದಿನ ನಂಬರ್ ಗೇಮ್ ನಲ್ಲಿ ಗೆಲುವು ನಮ್ಮದೇ ಅಂತ ಖುಷಿ ಪಡುತ್ತಿದೆ. ಇನ್ನು ಶಕ್ತಿ ಸೌಧದಲ್ಲಿ ನಡೆಯುವ ಇಂದಿನ ಮಹತ್ವದ ಪ್ರಕ್ರಿಯೆಗಾಗಿ ಸ್ಪೀಕರ್ ಕಚೇರಿ ಸುತ್ತಮುತ್ತಲೂ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ರಾಮಲಿಂಗಾರೆಡ್ಡಿ ರಾಜೀನಾಮೆ ಯೂ ಟರ್ನ್ ಲೆಕ್ಕಾಚಾರವೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ