‘ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ದೇವೇಗೌಡ ಅವರು ಇಟ್ಟ ಪ್ರತೀ ಹೆಜ್ಜೆಗಳು ನಮಗೆ ಒಂದು ಪಾಠ’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಪದ್ಮನಾಭನಗರದ ನಿವಾಸದಲ್ಲಿ ಸೋಮವಾರ ಸಂಜೆ ಭೇಟಿ ಮಾಡಿ, ಆಶೀರ್ವಾದ ಪಡೆದರು. ಡಿ ಕೆ ಶಿವಕುಮಾರ್ ಅವರಿಗೆ ದೇವೇಗೌಡರು ಶಾಲು ಹೊದೆಸಿ ಅಭಿನಂದಿಸಿದರು. ಶಾಸಕರಾದ ಶರತ್ ಬಚ್ಚೆಗೌಡ, ತಮ್ಮಯ್ಯ, ಡಾ ಎಂ ಸಿ ಸುಧಾಕರ್, ನಾ ರಾ ಭರತ್ ರೆಡ್ಡಿ ಜತೆಗಿದ್ದರು.

ಈ ಬಗ್ಗೆ ಡಿಕೆಶಿ ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಿ ಶ್ರೀ ಎಚ್‌.ಡಿ. ದೇವೇಗೌಡ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ ಅವರ ಆಶೀರ್ವಾದ ಪಡೆದೆ. ಈ ವೇಳೆ ಅವರು ಪ್ರೀತಿಯಿಂದ ಸನ್ಮಾನಿಸಿ ಶುಭ ಹಾರೈಸಿದರು. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಶ್ರೀ ದೇವೇಗೌಡ ಅವರು ಇಟ್ಟ ಪ್ರತೀ ಹೆಜ್ಜೆಗಳು ನಮಗೆ ಒಂದು ಪಾಠ ಎಂದು ಬರೆದಿದ್ದಾರೆ.

ಹಾಸನದ ಮಸೀದಿಯಲ್ಲಿ ಕಳ್ಳತನ: ಕಂಪ್ಯೂಟರ್, ಕ್ಯಾಮೆರಾ ಕದ್ದೊಯ್ದ ಕಳ್ಳ..

‘ಏನೇ ಆದ್ರು ನನ್ನ ಫೇವರಿಟ್ ಆರ್‌ಸಿಬಿ, ನಿರಾಸೆ ಬೇಡ, ಆಶಾವಾದವಿರಲಿ’

ಹಾಸನದಲ್ಲಿ ವರುಣನ ಆರ್ಭಟ: ಮದುವೆಗೆ ತಂದಿದ್ದ ವಸ್ತ್ರಾಭರಣ ಬೀದಿಪಾಲು

About The Author