Hubli News: ರಾಜ್ಯದಲ್ಲಿ ಪದೇ ಪದೇ ಬ್ಯಾಂಕ್ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಹುಬ್ಬಳ್ಳಿ ರಾಷ್ಟ್ರೀಕೃತ ಬ್‌ಯಾಂಕ್‌ನಲ್ಲೂ ದರೋಡೆ ಯತ್ನ ನಡೆದಿದೆ.
ಹುಬ್ಬಳ್ಳಿ ಎಪಿಎಂಸಿಯಲ್ಲಿರುವ ಕೆನರಾ ಬ್ಯಾಂಕ್ ದರೋಡೆ ಯತ್ನ ನಡೆದಿದ್ದು, ದುಷ್ಕರ್ಮಿಗಳು ಮುಖ್ಯ ಬಾಾಗಿಲು ಮುರಿದು, ಕೀ ಕಟ್ ಮಾಡಿದ್ದು, ದರೋಡೆಗೆ ಪ್ರಯತ್ನಿಸಿದ್ದಾರೆ. ಇನ್ನು ಬ್ಯಾಂಕ್ ಮುಖ್ಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದೇ, ಇಂಥ ಘಟನೆಗೆ ಕಾರಣ ಅಂತಾ ಆರೋಪಿಸಲಾಗುತ್ತಿದೆ.
ಇಷ್ಟಾದರೂ, ಯಾವುದೇ ದೂರು ನೀಡದೇ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಈ ಕೇಸ್ ಮುಚ್ಚಿಹಾಕಲು ಬ್ಯಾಂಕ್ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಮುರಿದ ಬಾಗಿಲು, ಗೇಟ್ ಮತ್ತು ಕೀ ಗೆ ವೆಲ್ಡಿಂಗ್ ಮಾಡಿಸಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು, ಈ ಬಗ್ಗೆ ಕೇಳಿದ್ರೆ ಬ್ಯಾಂಕ್ ಮ್ಯಾನೇಜರ್ ಬ್ರಹ್ಮಾನಂದ್ ಧಿಮಾಕು ತೋರಿಸಿದ್ದಾರೆ.