Tuesday, January 21, 2025

Latest Posts

Karnataka TV Impact: ದರೋಡೆಯಾಗಿದ್ದ ಬ್ಯಾಂಕ್ ಮ್ಯಾನೇಜರ್‌ನನ್ನು ತರಾಟೆಗೆ ತೆಗೆದುಕೊಂಡ ಕಮಿಷನರ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದರೂ, ಆ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ಕರ್ನಾಟಕ ಟಿವಿ ಎಕ್ಸ್‌ಕ್ಲೂಸಿವ್ ಸುದ್ದಿ ಬಿತ್ತರಿಸಿತ್ತು.

ಕರ್ನಾಟಕ ಟಿವಿಯ ಬಿಗ್‌ ಇಂಪ್ಯಾಕ್ಟ್ ಆಗಿ, ಹುಬ್ಬಳ್ಳಿ ಕಮಿಷನರ್ ಎನ್.ಶಶಿಕುಮಾರ್ ಬ್ಯಾಂಕ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡದೇ, ನಿರ್ಲಕ್ಷ್ಯ ವಹಿಸಿದ್ದ ಬ್ಯಾಂಕ್ ಮ್ಯಾನೇಜರ್ ಬ್ರಹ್ಮಾನಂದ್‌ನನ್ನು ಕಮಿಷನರ್ ತರಾಟೆಗೆ ತೆಗೆದುಕೊಂಡರು. ರಾಜ್ಯ ನೋಡುವ ಸುದ್ದಿಯಾಗಿದೆ ನೀವು ಯಾಕೆ ನಿರ್ಲಕ್ಷ್ಯ ವಹಿಸಿದ್ದೀರಿ ಅಂತ ಕಮಿಷನರ್‌ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಗಿದ್ದೇನು..?

ಹುಬ್ಬಳ್ಳಿ ಎಪಿಎಂಸಿಯಲ್ಲಿರುವ ಕೆನರಾ ಬ್ಯಾಂಕ್ ದರೋಡೆ ಯತ್ನ ನಡೆದಿದ್ದು, ದುಷ್ಕರ್ಮಿಗಳು ಮುಖ್ಯ ಬಾಾಗಿಲು ಮುರಿದು, ಕೀ ಕಟ್‌ ಮಾಡಿದ್ದು, ದರೋಡೆಗೆ ಪ್ರಯತ್ನಿಸಿದ್ದರು. ಈ ಬಗ್ಗೆ ಬ್ಯಾಂಕ್ ಮುಖ್ಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು.

ಯಾವುದೇ ದೂರು ನೀಡದೇ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಹಾರಿಕೆಯ ಉತ್ತರ ನೀಡುತ್ತಿದ್ದರು. ಅಲ್ಲದೇ ಈ ಕೇಸ್ ಮುಚ್ಚಿಹಾಕಲು ಬ್ಯಾಂಕ್ ಸಿಬ್ಬಂದಿ ಪ್ರಯತ್ನಿಸುತ್ತಿದ್ದಂತೆ ತೋರುತ್ತಿತ್ತು. ಮುರಿದ ಬಾಗಿಲು, ಗೇಟ್ ಮತ್ತು ಕೀ ಗೆ ವೆಲ್ಡಿಂಗ್ ಮಾಡಿಸಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು, ಈ ಬಗ್ಗೆ ಕೇಳಿದ್ರೆ ಬ್ಯಾಂಕ್ ಮ್ಯಾನೇಜರ್ ಬ್ರಹ್ಮಾನಂದ್ ಧಿಮಾಕು ತೋರಿಸಿದ್ದರು. ವೀಡಿಯೋ ಮಾಡುವಾಗ ಕ್ಯಾಮೆರಾಗೆ ಅಡ್ಡ ಕೈ ಹಾಕಿ, ಧಮ್ಕಿ ಹಾಕಿದ್ದರು. ಇದೀಗ ಕರ್ನಾಟಕ ಟಿವಿ ಇಂಪ್ಯಾಕ್ಟ್ ಆಗಿ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Latest Posts

Don't Miss