Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಕಂಪನಿಯ ಯಶಸ್ಸಿನ ಹಿಂದಿರುವ ಪರಿಶ್ರಮಿಗಳ ಬಗ್ಗೆ ಹೇಳಿದ್ದಾರೆ.
ಸಂಗೀತಾ ಕಂಪನಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. 1974ರಲ್ಲಿ ಈ ಸಂಸ್ಥೆ ಶುರುವಾಗಿತ್ತು. ಸುಭಾಷ್ ಚಂದ್ರ ಅವರ ತಂದೆ ಮತ್ತು ಅವರ ಸ್ನೇಹಿತರು ಸೇರಿ ಶುರು ಮಾಡಿದ್ದು. ಆದರೆ ಸ್ನೇಹಿತರೆಲ್ಲ ಹೋದ ಮೇಲೆ ಇದು ಫ್ಯಾಮಿಲಿ ಬ್ಯುಸಿನೆಸ್ ಆಗಿದೆ ಅಂತಾರೆ ಸುಭಾಷ್.
ಇನ್ನು ಸುಭಾಷ್ ಅವರು ಮಾತ್ರವಲ್ಲದೇ, ಅವರ ಪತ್ನಿ ಮತ್ತು ಮಗ ಕೂಡ ಕಂಪನಿಯ ಅಭಿವೃ್ದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಮನೆಯ ಆಫೀಸಿನಲ್ಲೇ 25 ಮಂದಿ ಕೆಲಸಗಾರರ ಜತೆ ಕಂಪನಿಯ 1 ಭಾಗದ ಕೆಲಸವನ್ನು ಸುಭಾಷ್ ಚಂದ್ರ ಅವರ ಪತ್ನಿ ನಿಭಾಯಿಸುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕಂಪನಿ ಅಭಿವೃದ್ಧಿಯಾಗಲು ಏನೇನು ಕೆಲಸ ಮಾಡಬೇಕೋ, ಅದನ್ನೆಲ್ಲ ಮಗ ಮಾಡೋದು ಎಂದಿದ್ದಾರೆ. ಸುಭಾಷ್ ಚಂದ್ರ.
ಇವರೆಲ್ಲರೂ ಸೇರಿ ಇದೀಗ ಸಂಗೀತಾ ಕಂಪನಿಯಲ್ಲಿ ಸದ್ಯ 5 ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಕಂಪನಿ ವಿಶೇಷ ಏನಪ್ಪಾ ಅಂದ್ರೆ, ಈ ಕಂಪನಿಯ ಸೇಲ್ಸ್‌ಮ್ಯಾನ್ ಗ್ರಾಹಕರ ಜತೆ ಏನೇನು ಮಾತನಾಡಿದ್ದಾರೆಂದು, ಕಂಪನಿಯ ರ್ಯಾಂಡಮ್‌ಮಲ್ಲಿ ಬರುತ್ತದೆ. ಹಾಗಾಗಿ ಮಾತುಕತೆಯಲ್ಲಿ ಏನೇ ಸಮಸ್ಯೆ ಆದರೂ, ಅದಕ್ಕೆ ಫ್ರೂಫ್ ಇರುತ್ತದೆ. ಅಲ್ಲದೇ ಎಐ ಅಳವಡಿಯ ಕೆಲಸ ಕೂಡ ಆಗುತ್ತಿದೆ ಎಂದು ಸುಭಾಷ್ ಚಂದ್ರ ಅವರು ವಿವರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




