ಬೆಂಗಳೂರು: ಸಾಧನೆಗೆ ವಯಸ್ಸಿನ ಮತ್ತು ಮಹಿಳೆ , ಪುರುಷ ಎನ್ನುವ ಬೇಧ ಭಾವವಿರುವುದಿಲ್ಲ . ಮಹಿಳೆಯರು ಸಾಧನೆ ಮಾಡುವುದರಲ್ಲಿ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲ ಎನ್ನುವುದು ಪದೇ ಪದೇ ಸಾಭೀತುಪಡಿಸುತಿದ್ದಾರೆ. ಈಗ ಈ ಸಾಲಿಗೆ ಇನ್ನೊಂದು ಮಹಿಳೆಯ ಹೆಸರು ಸೇರಿಕೊಂಡಿದೆ. ಅವರೇ ಅಂಬಿಗ ಸುಬ್ರಮಣಿಯನ್.
ಶಾಂಘೈ ಮೂಲದ ಸಂಶೋಧನಾ ಸಂಸ್ಥೆಯಾದ ಹುರನ್ ರಿಪೋರ್ಟ್ ತನ್ನ ಹುರನ್ ಇಂಡಿಯಾ ರಿಚ್ ಲಿಸ್ಟ್ 2017 ನ್ನು ಬಿಡುಗಡೆಗೊಳಿಸಿದೆ. 8 ಸಾವಿರದ 200 ಕೋಟಿ ಗಿಂತ ಹೆಚ್ಚಿನ ಮೌಲ್ಯದ ಭಾರತೀಯ ಯುನಿಕಾರ್ನ್ ಸಂಸ್ಥೇಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅಂಬಿಗ ಸುಬ್ರಮಣಿಯನ್ ಪಾತ್ರರಾಗಿದ್ದಾರೆ.
ಭಾರತದ ಎಂಟು ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯರಿವಗೆ ಒಬ್ಬರಾದ ಡಾಟಾ ಅನಾಲಿಟಿಕ್ಸ್ ಕಂಪನಿ ಎಂಯು ಸಿಗ್ಮಾದ ಮಾಜಿ ಸಿಇಒ ಅವರು ಸುಬ್ರಮಣಿಯನ್ ಈಗ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಮಿಲಿಯೇನರ್ ಆಗಿದ್ದಾರೆ. ಎಂಬುದು ತಿಳಿದುಬಂದಿದೆ.
ಇನ್ನು ಸಾಕಷ್ಟು ಮಹಿಳೆಯರು ಚಿಕ್ಕ ವಯಸ್ಸಿನಲ್ಲಿ ದೊಡ್ಡ ದೊಡ್ಡ ಕಂಪನಿಯಲ್ಲಿ ಮಲ್ಟಿ ನ್ಯಾಶನಲ್ ಕಂಪನಿಯ ಸಿಇಒಗಳಾಗಿ ಕಂಪನಿಗಳನ್ನೇ ಮುನ್ನಡೆಸುತಿದ್ದಾರೆ. ಇದರಿಂದ ಮಹಿಳೆಯರು ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವುದು ತಿಳಿಯುತ್ತದೆ.
Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ ಫ್ಯಾನ್ಸ್ ವಾರ್..!