ಬೆಂಗಳೂರು: ಬಹುಮತವಿಲ್ಲದ ಸರ್ಕಾರವನ್ನು ವಿಪಕ್ಷ ಎದುರಿಸುತ್ತಿರೋದು ಇದೇ ಮೊದಲು ಅಂತ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶಾಸಕರ ಸರಣಿ ರಾಜೀನಾಮೆಯಿಂದ ದೃತಿಗೆಡದ ದೋಸ್ತಿ ಸರ್ಕಾರ ಇಂದು ವಿಧಾನಮಂಡಲ ಅಧಿವೇಶನ ನಡೆಸುತ್ತಿದೆ. ಇದು ಸಹಜವಾಗಿಯೇ ಬಿಜೆಪಿ ಆರೋಪಗಳಿಗೆ ಗುರಿಯಾಗಿದ್ದು, ದೋಸ್ತಿಗಳ ವಿರುದ್ಧ ಟೀಕಾಸ್ತ್ರ ಪ್ರಯೋಗ ಮುಂದುವರಿದಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಎಂಎಲ್ ಸಿ ಕೋಟಾ ಶ್ರೀನಿವಾಸ ಪೂಜಾರಿ, ಬಹುಮತವಿಲ್ಲದ ಸರ್ಕಾರವನ್ನು ಸದನದಲ್ಲಿ ವಿಪಕ್ಷ ಎದುರಿಸುತ್ತಿದೆ. ಇತಿಹಾಸದಲ್ಲಿ ಮೊದಲನೆ ಬಾರಿಗೆ ಈ ರೀತಿ ಸನ್ನಿವೇಶ ಎದುರಾಗಿದೆ ಎಂದರು. ಸರ್ಕಾರ ಮುಂದುವರಿಸುವುದಕ್ಕೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಗೆ ಅಧಿಕಾರವೇ ಇಲ್ಲ. ಇನ್ನು ಬಹುಮತವೇ ಇಲ್ಲದ ಕಾರಣದಿಂದಾಗಿ ಅವಿಶ್ವಾಸದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಂತ ಹೇಳಿದರು.
ಸೂತ್ರಧಾರ ಸಿದ್ದು….! ಮಿಸ್ ಮಾಡದೇ ಈ ವಿಡಿಯೋ ನೋಡಿ