Wednesday, April 23, 2025

Latest Posts

ವಿಶ್ವಸುಂದರಿ ಪಟ್ಟಕ್ಕೇರಿದ ಕರೋಲಿನಾ ಬಿಲಾವ್ಸ್ಕಾ: ರನ್ನರ್ ಅಪ್ ಆದ ಭಾರತೀಯ ಸುಂದರಿ..

- Advertisement -

ಮಿಸ್‌ವರ್ಲ್ಡ್ 2021 ಪಟ್ಟವನ್ನ ಪೊಲೆಂಡ್ ಸುಂದರಿ, ಕರೋಲಿನಾ ಬಿಲಾವ್ಸ್ಕಾ ಪಡೆದಿದ್ದು, ಮೊದಲ ರನ್ನರ್ ಅಪ್ ಆಗಿ ಭಾರತೀಯ ಸುಂದರಿ ಶ್ರೀಸೈನಿ ಹೊರಹೊಮ್ಮಿದ್ದಾರೆ. ಪೋರ್ಟೋರಿಕೋ ಸ್ಯಾನ್ ಸುವಾನ್‌ನಲ್ಲಿ ಮಿಸ್‌ವರ್ಲ್ಡ್ ಸ್ಪರ್ಧೆ ಏರ್ಪಟ್ಟಿತ್ತು. ಅಮೆರಿಕಾ, ಐರ್ಲೆಂಡ್ ಸೇರಿ ಹಲವು ದೇಶದ ಸುಂದರಿಯರು ಕಾಂಪಿಟೇಶನ್‌ನಲ್ಲಿ ಭಾಗವಹಿಸಿದ್ದರು. ಆದ್ರೆ ಅವರನ್ನೆಲ್ಲ, ಹಿಂದಿಕ್ಕಿ, ಕರೋಲಿನಾ ವಿಶ್ವಸುಂದರಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕರೋಲಿನಾ, ನನಗೆ ಮಾತೇ ಬರುತ್ತಿಲ್ಲ, ಅಷ್ಟು ಖುಷಿಯಾಗಿದ್ದೇನೆ. ನನಗೆ ನಂಬೋಕ್ಕೆ ಆಗ್ತಿಲ್ಲಾ ನಾನು ವಿಶ್ವಸುಂದರಿಯಾಗಿದ್ದೇನೆಂದು. ಎಷ್ಟೆಲ್ಲ ಕಾಂಪಿಟೇಟರ್ಸ್ ಇದ್ದರೂ, ಅವರನ್ನೆಲ್ಲ ನೋಡಿ, ನಾನು ಕಂಗಾಲಾಗಿದ್ದೆ. ಆದ್ರೂ ನಾನು ಗೆಲ್ಲಲು ಪ್ರಯತ್ನ ಪಡುತ್ತಿದ್ದೆ. ಫೈನಲಿ ನನಗೆ ಗೆಲುವು ಸಿಕ್ಕಿದೆ. ಇಲ್ಲಿ ಸ್ಪರ್ಧಿಸಿದ ಎಲ್ಲರೂ, ಪ್ರಯತ್ನಿಸಿದ್ದಾರೆ. ಅವರ ಬಗ್ಗೆಯೂ ಹೆಮ್ಮೆ ಇದೆ ನನಗೆ ಎಂದಿದ್ದಾರೆ. ಇನ್ನು ಕೆರೋಲಿನಾಗೆ ಮೊದಲ ರನ್ನರ್ ಅಪ್ ಶ್ರೀಸೈನಿ ಮತ್ತು ಎರಡನೇಯ ರನ್ನರ್ ಅಪ್ ಒವಿಲಿಯಾ ಅಭಿನಂದಿಸಿದ್ದಾರೆ.

ಇನ್ನು ಮೊದಲನೇಯ ರನ್ನರ್ ಅಪ್ ಆಗಿರುವ ಶ್ರೀಸೈನಿ(26), ಅಮೆರಿಕದಲ್ಲಿ ನೆಲೆಸಿದ್ದು, ಅಮೆರಿಕದ ಪ್ರಜೆಯಾಗಿದ್ದಾರೆ. ಮಾಸ್ ಕಮ್ಯೂನಿಕೇಶನ್ ಕೋರ್ಸ್ ಮಾಡಿರುವ ಶ್ರೀಸೈನಿ, ಪಂಜಾಬ್‌ನ ಲುಧಿಯಾನಾದ ನಿವಾಸಿಯಾಗಿದ್ದಾರೆ. ಇವರಿಗೆ 5 ವರ್ಷವಿದ್ದಾಗಲೇ ಈಕೆಯ ಕುಟುಂಬ ಅಮೆರಿಕಕ್ಕೆ ಬಂದು ನೆಲೆಯುರಿತ್ತು. 2018ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ವೈಡ್, 2017ರಲ್ಲಿ ಮಿಸ್ ಇಂಡಿಯಾ ಯುಎಸ್‌ಎ, 2019ರಲ್ಲಿ ಮಿಸ್‌ವರ್ಲ್ಡ್ ವಾಷಿಂಗ್ಟನ್ ಕಿರೀಟವನ್ನ ಮುಡಿಗೇರಿಸಿಕೊಂಡ ಖ್ಯಾತಿ ಹೊಂದಿದ್ದಾರೆ. ಈ ಸುಂದರಿ ಜೀವನದಲ್ಲಿ ಸುಮಾರು ಕಷ್ಟಗಳನ್ನು ಎದುರಿಸಿ, ಈ ಎಲ್ಲ ಗೆಲುವನ್ನು ಸಾಧಿಸಿದ್ದಾರೆ. ಈಕೆ ಅಪಘಾತಗೊಂಡು, ಜೀವನ್ಮರಣದ ಮಧ್ಯೆ ಹೋರಾಡಿ, ಸಾವನ್ನೇ ಗೆದ್ದು ಬಂದಿದ್ದಾಳೆ.

- Advertisement -

Latest Posts

Don't Miss