NPCIL ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ(Nuclear Power Corporation of India- NPCIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 42 ನರ್ಸ್, ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಸೇರಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ npcilcareers.co.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಹುದ್ದೆಯ ಮಾಹಿತಿ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್ವೈಸರ್)- 03
ನರ್ಸ್ A-02
ಅಸಿಸ್ಟೆಂಟ್ ಗ್ರೇಡ್ 1(HR)-13
ಅಸಿಸ್ಟೆಂಟ್ ಗ್ರೇಡ್ 1(F&A)-11
ಅಸಿಸ್ಟೆಂಟ್ ಗ್ರೇಡ್ 1(C &MM)-04
ಸ್ಟೆನೋಗ್ರಾಫರ್ ಗ್ರೇಡ್ 1- 09
ವಿದ್ಯಾರ್ಹತೆ:
ನರ್ಸ್ A- ಪಿಯುಸಿ ಉತ್ತೀರ್ಣರಾಗಿರಬೇಕು, ಜತೆಗೆ ನರ್ಸಿಂಗ್ನಲ್ಲಿ 3 ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ಉಳಿದ ಹುದ್ದೆಗಳಿಗೆ- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. 1 ನಿಮಿಷದಲ್ಲಿ 30 ಇಂಗ್ಲಿಷ್ ಪದಗಳನ್ನು ಟೈಪ್ ಮಾಡುವ ಸ್ಪೀಡ್ ಇರಬೇಕು.
ವೇತನ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್ವೈಸರ್)-ಮಾಸಿಕ ₹ 44,900
ನರ್ಸ್ A-ಮಾಸಿಕ ₹ 44,900
ಅಸಿಸ್ಟೆಂಟ್ ಗ್ರೇಡ್ 1(HR)- ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(F&A)-ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(C &MM)-ಮಾಸಿಕ ₹ 25,500
ಸ್ಟೆನೋಗ್ರಾಫರ್ ಗ್ರೇಡ್ 1- ಮಾಸಿಕ ₹ 25,500
ವಯೋಮಿತಿ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್ವೈಸರ್)- 18-35 ವರ್ಷ
ನರ್ಸ್ A-18-30 ವರ್ಷ
ಅಸಿಸ್ಟೆಂಟ್ ಗ್ರೇಡ್ 1(HR)- 21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1(F&A)-21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1(C &MM)-21ರಿಂದ 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 1- 21ರಿಂದ 28 ವರ್ಷ
ಉದ್ಯೋಗದ ಸ್ಥಳ : ಕಾರವಾರ
ಅರ್ಜಿ ಸಲ್ಲಿಕೆ ದಿನಾಂಕ :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02/03/2022