Thursday, December 4, 2025

Latest Posts

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಿದ ಕೆಇಎ.

- Advertisement -

ಬೆಂಗಳೂರು; ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ತಿಂಗಳ ನವೆಂಬರ್ ೩೦ ರವರೆಗೆ ವಿಸ್ತರಿಸಿದೆ. ಶುಲ್ಕ ಪಾವತಿಸಲು ಡಿಸೆಂಬರ್ ೬ ಕೊನೆಯ ದಿನ.

ಈ ಮೊದಲು ಅರ್ಜಿ ಸಲ್ಲಿಸಲು ನ.೬ ರ ಕೊನೆಯ ದಿನ ಎಂದು ನಿಗದಿಪಡಿಸಲಾಗಿತ್ತು. ಕೆ-ಸೆಟ್ ಫಲಿತಾಂಶ ನ.೨೦ ರವರೆಗೆ ವಿಸ್ತರಿಸಲಾಗಿತ್ತು.

ಇದೀಗ ಕಂಫ್ಯೂಟರ್ ವಿಜ್ಞಾನ, ರಾಜ್ಯಶಾಸ್ತç, ರಸಾಯನ ವಿಜ್ಞಾನ, ಎಲೆಕ್ಟೊçÃನಿಕ್ಸ್, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ಅರ್ಥಶಾಸ್ತç ಮತ್ತು ಭೌತವಿಜ್ಞಾನ ವಿಷಯಗಳ ವಿದ್ಯಾರ್ಹತೆಯನ್ನು ನೀಡಿ ರಾಜ್ಯ ಸರ್ಕಾರ ನ.೧೮ ರಂದು ಅಧಿಸೂಚನೆ ಹೊರಡಿಸಿದೆ. ಹೀಗಾಗಿ, ಕೊನೆಯ ದಿನವನ್ನು ಮತ್ತೆ ವಿಸ್ತರಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ರಮ್ಯಾ ತಿಳಿಸಿದ್ದಾರೆ.

- Advertisement -

Latest Posts

Don't Miss