Hubli News: ಹುಬ್ಬಳ್ಳಿ: ಕುದುರೆ ಕಾಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಂಬಳ ಕೇಳಿದ ವಿಚಾರಕ್ಕೆ ನಟೋರಿಯಸ್ ರೌಡಿಶೀಟರ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ ಚಾಕು ತೋರಿಸಿ ಕೊಲೆಗೆ ಯತ್ನಿಸಿದ್ದ ಸೈಂಟಿಸ್ಟ್ ಮಂಜ್ಯಾ ಸೇರಿದಂತೆ ಮೂವರು ಆರೋಪಿಗಳನ್ನು ಕೇಶ್ವಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಕೇಶ್ವಾಪುರ ಠಾಣೆಯ ವ್ಯಾಪ್ತಿಯಲ್ಲಿ ವಾಸವಿದ್ದ ಅಬ್ದುಲ್ ಖಾದರ್ ಎಂಬಾತ ರೌಡಿ ಶೀಟರ್ ಮಂಜ್ಯಾ ಬಳಿಯಿದ್ದ ಕುದುರೆಗಳನ್ನು ಕಾಯೋ ಕೆಲಸ ಮಾಡ್ತಿದ್ದ. ಇದಕ್ಕೆ ನನಗೆ ಸಂಬಳ ಕೊಡಿ ಅಂತಾ ಅಬ್ದುಲ್ ರೌಡಿಶೀಟರ್ ಮಂಜ್ಯಾನನ್ನ ಕೇಳಿದ್ದ, ಇದಕ್ಕೆ ಸಿಟ್ಟಗೆದ್ದ ಮಂಜ್ಯಾ ತನ್ನ ಮನೆಯವರನ್ನು ಕರೆದುಕೊಂಡು ಬಂದು ಅಬ್ದುಲ್ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೊಳಗಾದ ಅಬ್ದುಲ್ ಜೀವ ಭಯದಿಂದ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಕೂಡಲೇ ಅಲರ್ಟ್ ಆದ ಇಸ್ಪೆಕ್ಟರ್ ಹಟ್ಟಿ ಆ್ಯಂಡ್ ಟೀಂ ರೌಡಿ ಶೀಟರ್ ಮಂಜ್ಯಾ,ಮಾಲಾ, ಮುಸ್ಕಾನ್ ಸೇರಿದಂತೆ ಮೂವರು ಆರೋಪಿಗಳ ಮೇಲೆ ಕೊಲೆ ಯತ್ನದ ಕೇಸ್ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇನ್ನು ರೌಡಿಶೀಟರ್ ಮಂಜ್ಯಾನ ಮೇಲೆ ಅಂತರ ಜಿಲ್ಲಾ ಪ್ರಕರಣಗಳು ಇರುವ ಕಾರಣ ಹೆಚ್ಚಿನ ವಿಚಾರಣೆಗಾಗಿ ನಡೆಸುವ ಸಾಧ್ಯತೆ ಇದ್ದು, ತನಿಖೆ ಬಳಿಕ ನಂತರವೇ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.




