Hassan News: ಹಾಸನ: ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದ್ದಾರೆ.
ಹೊಳೆನರಸೀಪುರ ಪಟ್ಟಣದ ಗಾಂಧಿ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಇನ್ನು ಈ ಸಂಭ್ರಮಾಚರಣೆಯಲ್ಲಿ ಪೆನ್ಡ್ರೈವ್ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿ, ಕಾರ್ತಿಕ್ ಗೌಡ ಮತ್ತು ಪುಟ್ಟರಾಜು ಕೂಡ ಭಾಗಿಯಾಗಿದ್ದಾರೆ. ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕನಾಗಿದ್ದ ಕಾರ್ತಿಕ್ ಶ್ರೇಯಸ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾನೆ.
ಇನ್ನು ಕಾಂಗ್ರೆಸ್ 25 ವರ್ಷಗಳ ಬಳಿಕ ಹಾಸನದಲ್ಲಿ ಜಯಭೇರಿಬ ಬಾರಿಸಿದ್ದು, ಸಂಭ್ರಮಾಚರಣೆ ವೇಳೆ ಗೌಡರ ಗೌಡ ಪ್ರೀತಂಗೌಡಗೆ ಜೈ ಎಂದು ಘೋಷಣೆ ಕೂಗಿದ್ದಾರೆ. ಹಾಸನದಲ್ಲಿ 25 ವರ್ಷಗಳ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಮೂಲಕ ಶ್ರೇಯಸ್ ಪಟೇಲ್ ಜಯಭೇರಿ ಬಾರಿಸಿದ್ದಾರೆ.
1999ರಲ್ಲಿ ಪುಟ್ಟಸ್ವಾಮಿಗೌಡರು ದೇವೇಗೌಡರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದರು. ಇದೀಗ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್, ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿದ್ದಾರೆ.
Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು
ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್
ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ

