Sunday, April 13, 2025

Latest Posts

ಮೇ-27ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ‘ಕೆಜಿಎಫ್-2’..!

- Advertisement -

ನರಾಚಿ ಕೋಟೆಯ ಕಹಾನಿಯನ್ನು ಬರೀ ಕರ್ನಾಟಕವಷ್ಟೇ ಅಲ್ಲ ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ರಾಕಿಭಾಯ್ ಉಗ್ರಾವತಾರಕ್ಕೆ, ಸ್ವಾಗ್ ಎಂಟ್ರಿಗೆ ಅಭಿಮಾನಿಗಳು ಉಘೇ ಉಘೇ ಅಂತಿದ್ದಾರೆ. ಕೆಜಿಎಫ್-2 ಸಿನಿಮಾ ರಿಲೀಸಾದ ಒಂದು ವಾರಕ್ಕೇನೇ ಲೆಕ್ಕವಿಲ್ಲದಷ್ಟು ದಾಖಲೆಗಳನ್ನ ಮಾಡಿ, ಭಾಕ್ಸಾಫೀಸನ್ನ ಧೂಳೆಬ್ಬಿಸುತ್ತಿದೆ. ಒಂದೇ ವಾರದಲ್ಲಿ ವಿಶ್ವದಾದ್ಯಂತ 800 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗವನ್ನ ಅತೀ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಕೆಜಿಎಫ್ ಚಾಪ್ಟರ್-2.

ಇದರ ಬೆನ್ನಲ್ಲೇ ನಿಮಗೆಲ್ಲರಿಗೂ ಕೆಜಿಎಫ್ ಟೀಂ ಖುಷಿ ಸುದ್ದಿಯೊಂದನ್ನ ಕೊಟ್ಟಿದೆ. ಯಶ್ ನಟನೆ, ಪ್ರಶಾಂತ್ ನೀಲ್ ಅದ್ಭುತ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣದ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್-2 ಸಿನಿಮಾ ಮೇ 27ಕ್ಕೆ ಅಮೆಜಾನ್ ಪ್ರೈಮ್ ಗೆ ಎಂಟ್ರಿ ಕೊಡಲಿದೆ. ಈ ಮೂಲಕ ಕುಟುಂಬದವರ ಜೊತೆ ಮನೆಯಲ್ಲೇ ಕೂತು ಕೆಜಿಎಫ್-2 ಸಿನಿಮಾವನ್ನ ಕಣ್ತುಂಬಿಸಿಕೊಳ್ಳಬಹುದು.

ಇನ್ನೂ ಕಳೆದ ಒಂದು ವಾರದಲ್ಲಿ ದಕ್ಷಿಣ ಭಾರತದಲ್ಲಿ 1.5ಕೋಟಿಗೂ ಹೆಚ್ಚು ಜನ ಈ ಸಿನಿಮಾವನ್ನ ವೀಕ್ಷಿಸಿದ್ದಾರೆ. ಸುಮಾರು 40ಲಕ್ಷಕ್ಕೂ ಅಧಿಕ ಜನ ಕರ್ನಾಟಕದಲ್ಲಿ , 30ಲಕ್ಷ ಜನ ತಮಿಳುನಾಡು, 50ಲಕ್ಷಕ್ಕೂ ಅಧಿಕ ಜನರು ಆಂಧ್ರ & ತೆಲಂಗಾಣದಲ್ಲಿ ವೀಕ್ಷಿಸಿದ್ದಾರೆ. ಉತ್ತರ ಭಾರತದಲ್ಲಿ 1.7ಕೋಟಿ ಜನ ಕೆಜಿಎಫ್-2 ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಒಂದು ವಾರದಲ್ಲಿ ಹಿಂದಿ ವರ್ಷನ್‌ನಲ್ಲಿ 270ಕೋಟಿಗೂ ಹೆಚ್ಚು ಗಳಿಕೆಯಾಗಿದೆ.

ಈ ಮಧ್ಯೆ ತಮಿಳುನಾಡಿನಲ್ಲಿಯೂ ಸಹ ಕೆಜಿಎಫ್-2 ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, 150 ಥಿಯೇಟರ್‌ಗಳು ಈ ವಾರ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದೆ. ಇನ್ನು ಮುಂದಿನ ದಿನಗಳಲ್ಲೆ ಮತ್ತೆಷ್ಟು ದಾಖಲೆಗಳನ್ನ ಮಾಡುತ್ತೆ ಕೆಜಿಎಫ್-2 ಸಿನಿಮಾ ಅನ್ನೋದನ್ನ ಕಾದು ನೋಡ್ಬೇಕು.

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss